ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಾರಂಗಿ ಡ್ಯಾಂ ವೀಕ್ಷಣೆಗೆ ತಾರತಮ್ಯ: ವಾಗ್ವಾದ

Mainashree
Updated On : 14 Jul 2013, 11:38 am

ಸೋಮವಾರಪೇಟೆ:  ಹಾರಂಗಿ ಜಲಾಶಯ ವೀಕ್ಷಣೆಗೆ ಸಂಬಂಧಿಸಿದಂತೆ ಪ್ರವಾಸಿಗರು ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ಮಾತಿಗೆ ಮಾತು ಬೆಳೆದು ಜಲಾಶಯದ ಎದುರೇ ಪ್ರವಾಸಿಗರು ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಆಗಮಿಸಿದ ಅಭಿಯಂತರರನ್ನೂ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆಯಿತು.  ಹಿಂದೆ ಭದ್ರತೆಯ ಹೆಸರಿನಲ್ಲಿ ಜಲಾಯಶದ ಆವರಣದೊಳಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿದೆಯಾದರೂ, ಶಿಫಾರ್ಸಿನ ಮೇರೆಗೆ ಕೆಲವರನ್ನು ಒಳಬಿಡುತ್ತಿರುವುದು ಮಾತ್ರ ಸ್ಥಳದಲ್ಲಿರುವ ಪ್ರವಾಸಿಗರನ್ನು ಅಣಕಿಸುತ್ತಿತ್ತು.  ಈ ಸಂದರ್ಭದಲ್ಲಿ ಕೆಲವರು ಗೇಟ್ ಕೀಪರ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ವಾಹನ ತಡೆ: ಕೂಡಲೇ ಅಭಿಯಂತರರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಪ್ರವಾಸಿಗರು, ಅದಾಗಲೇ ಒಳ ತೆರಳಿದ್ದ ವಾಹನಗಳು ಹೊರಬರದಂತೆ ತಡೆಯೊಡ್ಡಿದರು. ಅಭಿಯಂತರರು ಸ್ಥಳಕ್ಕೆ ಬರುವವರೆಗೂ ಯಾವುದೇ ವಾಹನಗಳನ್ನು ಹೊರಬಿಡುವದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.  ಈ ಘಟನೆ ನಡೆದು ಗಂಟೆಯ ನಂತರ ಸ್ಥಳಕ್ಕಾಗಮಿಸಿದ ಅಭಿಯಂತರ ನೇತ್ರಪಾಲಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು ಹಾಗೂ ಸಾರ್ವಜನಿಕರು, ಕೆಲವರಿಗೆ ಮಾತ್ರ ಹೇಗೆ ಪ್ರವೇಶ ನೀಡಿದ್ದೀರಿ? ನಮಗೂ ಒಳ ಹೋಗಲು ಅವಕಾಶ ನೀಡಿ ಎಂದು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಅಭಿಯಂತರರು ನೀಡಿದ ಸಮಜಾಯಿಷಿಂದ ತೃಪ್ತರಾಗದ ಪ್ರವಾಸಿಗರು ಅಭಿಯಂತರರ ವಿರುದ್ಧ ಧಿಕ್ಕಾರ ಕೂಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement