ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಜ್ಜಿ ಎಂದು ಕರೆದು ಅತ್ಯಾಚಾರ ಗೈದ ಕೂಲಿ

Rashmi Kasaragodu
Updated On : 16 Jul 2013, 1:30 am

ಕ.ಪ್ರ.ವಾರ್ತೆ, ಮಂಗಳೂರು, ಜು.15
ಅಜ್ಜಿ ಎಂದು ಮನೆ ಬಾಗಿಲು ತಟ್ಟಿದ 24ರ ಹರೆಯದ ವಲಸೆ ಕಾರ್ಮಿಕ ವೃದ್ಧೆಯೊಬ್ಬರನ್ನು ಕಟ್ಟಿ ಹಾಕಿ, ದರೋಡೆ ಮಾಡಿ ಅತ್ಯಾಚಾರವೆಸಗಿದ್ದಾನೆ.
 ಭಾನುವಾರ ರಾತ್ರಿ 7 ಗಂಟೆಗೆ ಪಡೀಲ್ ಸರಿಪಳ್ಳದ ಲೀನಾ ಡಿಸೋಜಾ (ಹೆಸರು ಬದಲಿಸಲಾಗಿದೆ) ಎಂಬವರ ಮನೆಯ ಬಾಗಿಲು ತಟ್ಟಿದ ಚಿಕ್ಕಬಳ್ಳಾಪುರದ ಚಿಂತಾಮಣಿಯ ವಲಸೆ ಕೂಲಿ ಕಾರ್ಮಿಕ ನಾಗೇಶ (24) ಅಜ್ಜಿ ಎಂದು ಕರೆದಿದ್ದಾನೆ. ಕೂಲಿ ಮಾಡುತ್ತಿದ್ದ ಈ ಯುವಕ ಪಕ್ಕದ ಮನೆಯಲ್ಲಿಯೇ ಇದ್ದಿದ್ದರಿಂದ ವೃದ್ಧೆ ಬಾಗಿಲು ತೆರೆದಿದ್ದಾರೆ.
 ಒಳ ಪ್ರವೇಶಿಸಿದ ತಕ್ಷಣ ಚೂರಿ ಹಿಡಿದು ಬೆದರಿಸಿ, ಬೊಬ್ಬೆ ಹೊಡೆದರೆ ಇರಿಯುವುದಾಗಿ ಹೆದರಿಸಿ, ವೃದ್ಧೆಯನ್ನು ವಿವಸ್ತ್ರಗೊಳಿಸಿ ಬೆಡ್‌ರೂಮ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಒಂದೂವರೆ ಗಂಟೆಗಳ ಕಾಲ ಮನೆ ಜಾಲಾಡಿ ಮನೆಯಲ್ಲಿದ್ದ 5,500 ನಗದು, ವೃದ್ಧೆಯ ಚಿನ್ನಾಭರಣಗಳನ್ನು ದೋಚಿದ್ದಾನೆ.
 ಮನೆಯಿಂದ ಪರಾರಿಯಾದ ಬಳಿಕ ವೃದ್ಧೆ ಬೊಬ್ಬೆ ಹೊಡೆದಿದ್ದು, ಮಳೆಯಲ್ಲಿ ಯಾರಿಗೂ ಕೇಳಿರಲಿಲ್ಲ. ಬಳಿಕ ಮಕ್ಕಳಿಗೆ ಕರೆ ಮಾಡಿ ತಿಳಿಸಿದ್ದು, ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರು. ಆರೋಪಿ ಕುಡಿದ ಮತ್ತಿನಲ್ಲಿದ್ದ ಎಂದು ವೃದ್ಧೆ ಪೊಲೀಸರಿಗೆ ತಿಳಿಸಿದ್ದಾರೆ.
ಊರವರೇ ಹಿಡಿದುಕೊಟ್ಟರು: ಬೆಳಗ್ಗಿನ ಜಾವ ಸರಿಪಲ್ಲದಲ್ಲಿ ಭಾಗದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಕಾಮುಕ ಕಾರ್ಮಿಕ ನಾಗೇಶನನ್ನು ಸ್ಥಳೀಯರೇ ವಶಕ್ಕೆ ಪಡೆದು ಗೂಸಾ ನೀಡಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
 ನಾಗೇಶ ಕೂಲಿ ಕೆಲಸಕ್ಕೆ ಮಂಗಳೂರಿಗೆ ಆಗಮಿಸಿದ್ದ. ಸರಿಪಳ್ಳದಲ್ಲಿ ವೃದ್ಧೆಯ ಮಗಳು ಮನೆ ನಿರ್ಮಿಸುತ್ತಿದ್ದು, ಅಲ್ಲಿಯೂ ಕೂಲಿ ಕೆಲಸ ಮಾಡುತ್ತಿದ್ದ. ವೃದ್ಧೆ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಮಕ್ಕಳಿದ್ದರೂ ಒಂಟಿ: ವೃದ್ಧೆಗೆ ಇಬ್ಬರು ಹೆಣ್ಣು ಹಾಗೂ ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಬ್ಬರು ಮದುವೆಯಾಗಿ ವಿದೇಶದಲ್ಲಿದ್ದರೆ, ಗಂಡು ಮಕ್ಕಳು ಊರಲ್ಲಿಯೇ ವಾಸವಾಗಿದ್ದರೂ, ವೃದ್ಧೆ ಒಂಟಿಯಾಗಿಯೇ ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement