ಹೋಮ್ಸ್ಟೇ :11 ಮಂದಿಗೆ ಜಾಮೀನು
ಮಂಗಳೂರು: ಹೋಮ್ಸ್ಟೇ ದಾಳಿ ನಡೆಸಿ ಬಂಧಿತರಾದ 11 ಮಂದಿಗೆ 2ನೇ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ವರುಣ್, ಉದಯ್, ನಿತಿನ್, ಸಂದೀಪ್, ಜಗದೀಶ್, ಮಹೇಶ್, ಕಿರಣ್, ವೇಣುಗೋಪಾಲ್, ತಾರಾನಾಥ್, ರಮೇಶ್, ಅರುಣ್ ಎಂಬವರಿಗೆ ಜಾಮೀನು ಲಭಿಸಿದೆ. ಜು.28ಕ್ಕೆ ಹೋಮ್ ಸ್ಟೇ ದಾಳಿ ನಡೆದು ವರ್ಷವಾಗುತ್ತದೆ. ಉದಯ್ ಎಂಬವರನ್ನು ದಾಳಿ ನಡೆದ 4 ತಿಂಗಳ ಬಳಿಕ ಬಂಧಿಸಲಾಗಿತ್ತು. ಉಳಿದವರನ್ನು ದಾಳಿ ನಡೆದ ತಕ್ಷಣ ಪೊಲೀಸರು ಬಂಧಿಸಿದ್ದರು.