ಕಳೆದ ವಸ್ತುಗಳಿಗೆ ಪಾಂಡೇಶ್ವರ ಠಾಣೆ ಸಂಪರ್ಕಿಸಿ
ಮಂಗಳೂರು: ಅತ್ತಾವರ ಈಸೀ ಡೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಬುಧವಾರ ಫಾತಿಮಾಥಾಮಿ ಎಂಬವರ ಹಣ, ಡ್ರೈವಿಂಗ್ ಲೈಸೆನ್ಸ್, ರೋಲ್ಡ್ಗೋಲ್ಡ್ ಚಿನ್ನ ಒಳಗೊಂಡ ಬ್ಯಾಗ್ ಸಿಕ್ಕಿದ್ದು, ವಸ್ತುಗಳನ್ನು ಪಾಂಡೇಶ್ವರ ಠಾಣೆಗೆ ಒಪ್ಪಿಸಲಾಗಿದ್ದು, ವಾರಸುದಾರರು ಸಂಪರ್ಕಿಸಬಹುದು.
ಪ್ರಿಸಿಡಿಯಂ ಅಪಾರ್ಟ್ಮೆಂಟ್ 403 ನಂಬರ್ನ ನಿವಾಸಿ ನೂರುಲ್ ಮುಬೀನ್ರ ಮಗಳು ಫಾತಿಮಾಥಾಮಿ ಎಂಬವರ ಬ್ಯಾಗ್ನಲ್ಲಿ ಎಂಟಿಎಸ್ ಮೊಬೈಲ್ ಫೋನ್, ರು. 5,122.50 ನಗದು ಹಣ, 3 ರೋಲ್ಡ್ಗೋಲ್ಡ್ ಚೈನ್ ಪತ್ತೆಯಾಗಿದೆ. ಕಂಪನಿಯ ಪ್ರೊಡೆಕ್ಷನ್ ಮ್ಯಾನೇಜರ್ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಸ್ವತ್ತುಗಳನ್ನು ಒಪ್ಪಿಸಿದ್ದಾರೆ. ವಾರಸುದಾರರು (0824-2220518) ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.