ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ರಾಘವೇಶ್ವರ ಶ್ರೀ ಪುರಪ್ರವೇಶ

Lingaraj Badiger
Updated On : 20 Jul 2013, 12:17 pm

ವಿಟ್ಲ: ಮಾಣಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ವಿಜಯ ಸಂವತ್ಸರದ ಚಾತುರ್ಮಾಸ್ಯ- ಹನುಮನೊಡನೆ ರಾಮನೆಡೆಗೆ ಕಾರ್ಯಕ್ರಮ ಮತ್ತು ರಾಮಕಥಾ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
 ಜು. 20ರಂದು ಸಂಜೆ 4 ಗಂಟೆಗೆ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀಗಳ ಪುರಪ್ರವೇಶ, ಭವ್ಯವಾದ ಸ್ವಾಗತ ಮತ್ತು ಮಂಗಲವಾದ್ಯಗಳೊಂದಿಗೆ 1008 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಮಾಣಿ ತನಕ ವಾಹನಗಳ ಮೆರವಣಿಗೆ, ಮಾಣಿಯಿಂದ ಪೆರಾಜೆ ಮಠಕ್ಕೆ ಕಾಲ್ನಡಿಗೆ ಮೆರವಣಿಗೆ ಸಾಗಲಿದೆ.
ಪಾಕಶಾಲೆ ಉದ್ಘಾಟನೆ: ಪೂರ್ವಸಿದ್ಧತೆಯ ಅಂಗವಾಗಿ ಶುಕ್ರವಾರ ಬೆಳಗ್ಗೆ ಪಾಕಶಾಲೆಯನ್ನು ಉದ್ಘಾಟಿಸಲಾಯಿತು. ವಿಜಯ ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧ್ಯಕ್ಷ ಬಂಗಾರಡ್ಕ ಜನಾರ್ದನ ಭಟ್, ಸಂಘಟನಾ ಕಾರ್ಯದರ್ಶಿ, ಪಾಕಶಾಲೆ ಸಂಚಾಲಕ ಕೆ.ಟಿ. ವೆಂಕಟೇಶ್ವರ ಭಟ್ ನೂಜಿ, ಅಧ್ಯಕ್ಷ ಸತ್ಯನಾರಾಯಣ ಮೊಗ್ರ, ಕಾರ್ಯದರ್ಶಿ ಗೋಪಾಲಕೃಷ್ಣ ಬಾರಿಕೆ, ಕೃಷ್ಣ ಭಟ್ ಬೈಪದವು, ಭೋಜನ ವಿತರಣೆ ಸಮಿತಿ ಅಧ್ಯಕ್ಷ ಅಶೋಕ ಕೆದಿಲ, ಉಗ್ರಾಣ ಸಮಿತಿ ಅಧ್ಯಕ್ಷ ಗಣೇಶ್ ಭಟ್ ಮೈಕೆ, ರವಿ ಕುಂಟಿನಿ ಇದ್ದರು.
'ಬ್ರಾಹ್ಮಣ' ಟೈಟಲ್‌ಗೆ
ಒಕ್ಕೂಟ ವಿರೋಧ
ಮಂಗಳೂರು: ಬಸವಣ್ಣ ಚಿತ್ರದ ಟೈಟಲ್ ಬದಲಾಯಿಸಿ ಬ್ರಾಹ್ಮಣ ಹೆಸರಿಡುವ  ಪ್ರಸ್ತಾಪಕ್ಕೆ ಅಖಿಛಲ ಬ್ರಾಹ್ಮಣ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.  ಬ್ರಾಹ್ಮಣ ಶೀರ್ಷಿಕೆ ಉತ್ತವಾಗಿದೆ, ಆದರೆ ಚಿತ್ರದ ಪೋಸ್ಟರ್‌ಗಳನ್ನು ನೋಡಿದರೆ ತದ್ವಿರುದ್ಧವಾಗಿದೆ. ಕೆಟ್ಟದಾಗಿ ಅಭಿವ್ಯಕ್ತಿಸುವ, ಪ್ರಚಾರದ ಗಿಮಿಕ್‌ಗಳನ್ನು ನಿರ್ಮಾಪಕರು ಬಿಡಬೇಕು. ಬ್ರಾಹ್ಮಣ ಟೈಟಲ್ ನೀಡಲು ಫಿಲ್ಮ್ ಚೇಂಬರ್ ನಿರಾಕರಿಸಿರುವುದು ಉತ್ತಮ ಮತ್ತು ಜವಾಬ್ದಾರಿಯುತ ಧೋರಣೆ ಎಂದು ಒಕ್ಕೂಟ ಅಧ್ಯಕ್ಷ ಪ್ರದೀಪ್ ಹೇಳಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement