ಮುಂಬೈಯ ರಂಗ ಕಲಾವಿದ ರಮೇಶ್ ಕರ್ಕೇರ ವಿಧಿವಶ
ಮುಂಬೈ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮುಂಬೈನ ರಂಗ ಕಲಾವಿದ ರಮೇಶ್ ಕರ್ಕೇರ (53) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ದ.ಕ. ಜಿಲ್ಲೆಯ ಮೂಲ್ಕಿ ಚಿತ್ರಾಪುನವರಾದ ರಮೇಶ್ ಮೂರುವರೆ ದಶಕಗಳ ಹಿಂದೆ ಮುಂಬೈನಲ್ಲಿ ಶಿಕ್ಷಣ ಪಡೆದು ಮೊಗವೀರ ಕೋ- ಆಪರೇಟಿವ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದರು. ಕಲಾ ಜಗತ್ತು ತಂಡ, ಉದಯರಂಗ, ಸದಾನಂದ ಸುವರ್ಣರ ನಾಟಕ ತಂಡಗಳಲ್ಲಿ ಈ ನಲ್ಕೆದಾಯೆ, ಬೂತದ ಇಲ್ಲ್, ಒರಿಯೆ ಮಗೆ ಒರಿಯೆ, ಬರ್ಸ, ನಾವಿಲ್ಲದಾಗ ಊರೇ ಗತಿ, ಪುಂಡಿ ಪಾಂಡವೆ ಇತ್ಯಾದಿ 200ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ ಪ್ರಸಿದ್ಧರಾಗಿದ್ದರು.
ವೀರಕೇಸರಿ ಕಲಾವೃಂದ, ಗೋರೆಗಾಂವ್ ಕರ್ನಾಟಕ ಸಂಘ, ಕನ್ನಡಿಗರ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇತ್ಯಾದಿ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದರು. ಮೃತರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ಅಂತ್ಯಕ್ರಿಯೆ ಗುರುವಾರ ಮೀರಾರೋಡ್ ಪೂರ್ವದ ರುದ್ರಭೂಮಿಯಲ್ಲಿ ನಡೆಯಿತು.
--