ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ಯಾನಿಟರಿ ಮಳಿಗೆಗೆ ನುಗ್ಗಿ ಕಳವು

Lingaraj Badiger
Updated On : 20 Jul 2013, 12:14 pm

ಮಂಗಳೂರು: ಫಳ್ನೀರ್ ಹೈಲ್ಯಾಂಡ್ ಬಳಿಯ ಪಿಸಿ ಮಲ್ಲಪ್ಪ ಆ್ಯಂಡ್ ಕೊ. ಮಳಿಗೆಗೆ ನುಗ್ಗಿದ ಕಳ್ಳರು 5 ಲಕ್ಷ ಮೌಲ್ಯದ ಗೃಹೋಪಯೋಗಿ  ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ.
5 ಲಕ್ಷಕ್ಕೂ ಮಿಕ್ಕಿದ್ದ ಹ್ಯಾಂಡ್ ಮತ್ತು ಹೆಡ್ ಶೋವರ್ ಇರುವ ಜಾಕ್ವರ್ ವಾಲ್ ಮಿಕ್ಸರ್‌ಗಳು ಕಳವಾಗಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮಳಿಗೆ ಬಾಗಿಲು ತೆರೆಯುವಾಗ ಕಳ್ಳತನ ಬೆಳಕಿಗೆ ಬಂದಿದೆ. ಕ್ಯಾಸ್ ಕೌಂಟರ್‌ನಲ್ಲಿ 49,173 ನಗದು ಕಳವಾಗಿದೆ. ಗುರುವಾರ ರಾತ್ರಿ ಮಳಿಗೆಯ ಹಿಂಬಾಗಿಲ ಬೀಗ ಮುರಿದು ಸುಲಭವಾಗಿ ಒಳಪ್ರವೇಶಿಸಿ ಕಳ್ಳರು ಬಾಕ್ಸ್‌ನಲ್ಲಿ ತುಂಬಿದ ಸೊತ್ತುಗಳನ್ನು ಕದ್ದೊಯ್ದರು.
15 ಸಿಸಿ ಕ್ಯಾಮೆರಾ !: ಮಳಿಗೆಯಲ್ಲಿ 15 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರಲ್ಲಿರುವ ದೃಷ್ಯವಾಳಿ ಪರಿಶೀಲನೆ ನಡೆಸಿದಾಗ ರಾತ್ರಿ 8 ಗಂಟೆವರೆಗಿನ ದೃಷ್ಯಗಳು ಮಾತ್ರ ದಾಖಲಾಗಿದ್ದವು! ರಾತ್ರಿ ಮಳಿಗೆ ಮುಚ್ಚಿ ಹೋಗುವ ವೇಳೆ ಎಂದಿನಂತೆ  ವಿದ್ಯುತ್ ಮೈನ್ ಸ್ವಿಚ್ ಆಫ್ ಮಾಡಿ ಹೋಗಿದ್ದರು. ಸಿಸಿ ಕ್ಯಾಮೆರಾಗಳೂ ಕೂಡಾ ಆಫ್ ಆಗಿವೆ ! ಆದ್ದರಿಂದ ಕಳ್ಳರು ಯಾವುದೇ ಸಿಸಿ ಕ್ಯಾಮೆರಾ ಭಯ ಇಲ್ಲದೆ ಸುಲಭವಾಗಿ ಕಳವು ಮಾಡಿದ್ದಾರೆ. ಅದೂ ಅಲ್ಲದೆ ಸಿಸಿ ಕ್ಯಾಮೆರಾಗಳಿಗೆ ಹಾನಿ ಕೂಡಾ ಆಗಿಲ್ಲ. ಆದ್ದರಿಂದ ಸಿಸಿ ಕ್ಯಾಮೆರಾ ಬಗ್ಗೆ ಸರಿಯಾಗಿ ಮಾಹಿತಿ ತಿಳಿದವರೇ ಈ ಕೃತ್ಯದಲ್ಲಿ ಶಾಮೀಲಾಗಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದ ಮೊದಲ ಮಹಡಿಯಲ್ಲಿರುವ ಕೋಣೆಯಿಂದ ಸೊತ್ತುಗಳು ಕಳವಾಗಿದೆ. ಈ ಕೋಣೆಗೆ ಗ್ರಾಹಕರಿಗೂ ಪ್ರವೇಶ ಇಲ್ಲ. ಗ್ರಾಹಕರ ಸೋಗಿನಲ್ಲಿ ಕಳ್ಳ ಬಂದು ಪರಿಶೀಲನೆ ಮಾಡಲು ಕೂಡಾ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement