ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾರು ಡಿಕ್ಕಿ: ಪಾದಚಾರಿ ಗಾಯ

Vishwanath S
Updated On : 21 Jul 2013, 11:45 am

ಕಾರ್ಕಳ: ಈದು ಗ್ರಾಮದ ಹೊಸ್ಮಾರ್ ಎಂಬಲ್ಲಿ ಕಾರು ಡಿಕ್ಕಿಯಾದ ಪರಿಣಾಮ ಪಾದಚಾರಿ ಗಾಯಗೊಂಡ ಘಟನೆ ಈದು ಗ್ರಾಮದ ಹೊಸ್ಮಾರ್ ಎಂಬಲ್ಲಿ ನಡೆದಿದೆ. ಈದು ಗ್ರಾಮದ ಹೊಸ್ಮಾರ್ ನಿವಾಸಿ ಗುಣಪಾಲ ಹೆಗ್ಡೆ ಗಾಯಗೊಂಡಿದ್ದಾರೆ.

ಜಾಲ್ಸೂರು: ಬಸ್, ಮಿನಿ ಲಾರಿ ಡಿಕ್ಕಿ
ಸುಳ್ಯ: ಮಿನಿ ಲಾರಿಯೊಂದು ಹಿಮ್ಮುಖ ಸಂಚರಿಸಿ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ಜಾಲ್ಸೂರಿನಲ್ಲಿ ನಡೆದಿದೆ. ಸಾಮಗ್ರಿಗಳನ್ನು ಹೇರಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಜಾಲ್ಸೂರು ಗೇಟ್ ಬಳಿ ಕೇರಳ ರಸ್ತೆಯಿಂದ ಪುತ್ತೂರು ರಸ್ತೆಗೆ ತಿರುಗುವಾಗ ಹಿಂಬದಿಯಿಂದ ಬಂದ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಬಸ್ ಮುಂಭಾಗದ ಗಾಜು ಪುಡಿಯಾಗಿದೆ.

ಸುಳ್ಯ: ಕೆಲವೆಡೆ ಶಾಲೆಗೆ ರಜೆ
ಸುಳ್ಯ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಶನಿವಾರವೂ ಮುಂದುವರಿದಿದ್ದು, ಕೆಲವೆಡೆ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುಬ್ರಹ್ಮಣ್ಯದಲ್ಲಿ ಕುಮಾರಧಾರ ಸೇತುವೆ ಮುಳುಗಡೆಯಾದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಎಲ್ಲ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕೆಲವು ಗ್ರಾಮೀಣ ಪ್ರದೇಶಗಳ ಶಾಲೆಗಳಿಗೂ ರಜೆ ಸಾರಲಾಗಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೆಲವು ಭಾಗಗಳಲ್ಲಿ ವಿದ್ಯುತ್ ಕೈಕೊಟ್ಟದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ತಂತಿಗಳು ನೆಲ ಮಟ್ಟದಲ್ಲಿ ನೇತಾಡುತ್ತಿದ್ದು ಸಂಪರ್ಕ ಕಡಿತಗೊಂಡಿದೆ.

ರಾಮಭಟ್‌ರನ್ನು ಒಪ್ಪುವ ಕಾಲ ಮುಗಿದಿದೆ: ಹೇರಳೆ
ಪುತ್ತೂರು: ಮಾಜಿ ಶಾಸಕ ರಾಮ ಭಟ್ ಕಾಂಗ್ರೆಸ್ ಶಾಸಕಿಯವರ ಕಚೇರಿಯನ್ನು ಉದ್ಘಾಟನೆ ಮಾಡಿದ ಬಳಿಕ ನಮ್ಮ ನಿಲವಿನಲ್ಲಿ ಬದಲಾವಣೆಯಾಗಿದ್ದು, ಇವತ್ತಿನ ಪರಿಸ್ಥಿತಿಯಲ್ಲಿ ಅವರನ್ನು ಒಪ್ಪುವ ಕಾಲ ಮುಗಿದು ಹೋಗಿದೆ ಎಂದು ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ತಿಳಿಸಿದರು.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಮ ಭಟ್ ಹಿರಿಯರು. ಜನಸಂಘ ಮತ್ತು ಬಿಜೆಪಿ ಸಂಘಟನೆಯ ಬೆಳವಣಿಗೆಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ಅವರು ಯಾವುದೇ ಪಕ್ಷದಲ್ಲಿದ್ದರೂ ಅವರ ಬಗ್ಗೆ ಗೌರವವಿದೆ ಎಂದರು.  
ಆದಿ ಚುಂಚನಗಿರಿ ಮಠಕ್ಕೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಷಡ್ಯಂತ್ರವಾಗಿದ್ದು, ಮಠ ಮಂದಿರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಹಿಂದೂ ಸಮಾಜವನ್ನು ಕೆಣಕುವ ಪ್ರಯತ್ನ ನಡೆಸಿದರೆ  ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಪ್ರಧಾನ ಕಾರ್ಯದರ್ಶಿ ಜಯರಾಮ ಪೂಜಾರಿ, ಬಿಜೆಪಿ ಮುಖಂಡ ಸಾಜ ರಾಧಾಕೃಷ್ಣ ಆಳ್ವ, ಮಾಧ್ಯಮ ವಕ್ತಾರ ಆರ್.ಸಿ. ನಾರಾಯಣ ಉಪಸ್ಥಿತರಿದ್ದರು.

ಸುಲತಾ ಕಾಮತ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಉಡುಪಿ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 34ನೇ ರಾಷ್ಟ್ರೀಯ ಹಿರಿಯರ ಅತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ 50 ವಿಭಾಗದಲ್ಲಿ ಕಟಪಾಡಿಯ ಸುಲತಾ ಕಾಮತ್ ನಡಿಗೆಯಲ್ಲಿ ತೃತೀಯ ಹಾಗೂ 4್ಗ00 ಮೀ,  4್ಗ400 ಮೀ. ರಿಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement