ಪಾಲಿಕೆ ವಾಹನ ಚಾಲಕನ ಕೊಲೆ ಯತ್ನ
ಕ.ಪ್ರ.ವಾರ್ತೆ ಮಂಗಳೂರು ಜು. 20
ಮಹಾನಗರ ಪಾಲಿಕೆ ವಾಹನವೊಂದರ ಚಾಲಕನ ಮೇಲೆ ನಾಲ್ವರು ದುಷ್ಕರ್ಮಿಗಳು ತಲವಾರ್ನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಲೇಡಿಹಿಲ್ ಬಳಿ ಶನಿವಾರ ನಡೆದಿದೆ.
ರೋಹಿತ್ ಹೊಯ್ಗೆಬೈಲ್ (30) ಎಂದಿನಂತೆ ವಾಹನದಲ್ಲಿ ಪಾಲಿಕೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಬೈಕ್ನಲ್ಲಿ ಬಂದ ನಾಲ್ವರು ವಾಹನ ತಡೆದು ತಲವಾರ್ಗಳಿಂದ ಹಲ್ಲೆ ನಡೆಸಿದ್ದಾರೆ. ಗಲಾಟೆ ನೋಡಿ ಜನ ಜಮಾಯಿಸಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವಾಹನ ಸಂಪೂರ್ಣ ಜಖಂ ಆಗಿದ್ದು, ರೋಹಿತ್ ಕುತ್ತಿಗೆ, ಕೈಗೆ ಗಾಯವಾಗಿದ್ದು, ಮಣ್ಣಗುಡ್ಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬದೊಳಗಿನ ಆಸ್ತಿ ವಿವಾದವೇ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ಕಳೆದ 4 ದಿನಗಳಿಂದ ನಾಲ್ವರು ಹಿಂಬಾಲಿಸುತ್ತಿರುವುದು ಗಮನಕ್ಕೆ ಬಂದಿತ್ತು. ಕೊಲೆ ಆರೋಪಿಯೊಬ್ಬ, ರೌಡಿ ಚಟುವಟಿಕೆಯಲ್ಲಿ ತೊಡಗಿದ್ದು, ಆತನಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ, ಆದರೂ ಕೊಲೆಗೆ ಯತ್ನಿಸಿದ್ದಾನೆ ಎಂದು ರೋಹಿತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.