ಬಸ್ ನಿಲುಗಡೆ ಆದೇಶ
ಮಂಗಳೂರು: ಪೆರಾಜೆ ಶ್ರೀರಾಮಚಂದ್ರಾಪುರ ಶಾಖಾ ಮಠದಲ್ಲಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಜು.21ರಿಂದ ಸೆ.3ರ ವರೆಗೆ ನಡೆಯುವುದರಿಂದ ಭಕ್ತರ ಅನುಕೂಲಕ್ಕೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ-ಮಾಣಿ ಮಧ್ಯೆ ಪೆರಾಜೆಯಲ್ಲಿ ಕೆಎಸ್ಆರ್ಟಿಸಿ ಎಲ್ಲ ಬಸ್ಗಳಿಗೆ ನಿಲುಗಡೆ ನೀಡುವಂತೆ ಕೆಎಸ್ಆರ್ಟಿಸಿ ಪುತ್ತೂರು ವಿಭಾಗ ಆದೇಶ ಹೊರಡಿಸಿದೆ. ಶ್ರೀಮಠದ ಆಡಳಿತ ಮಂಡಳಿಯ ಕೋರಿಕೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಎಲ್ಲ ವೇಗದೂತ ಮತ್ತು ಪುತ್ತೂರು-ಮಂಗಳೂರು ಸ್ಟೇಟ್ಬ್ಯಾಂಕ್ ಮಾರ್ಗದಲ್ಲಿ ಸಂಚರಿಸುವ ನಿಗದಿತ ನಿಲುಗಡೆ ಬಸ್ಗಳು, ಸಾಮಾನ್ಯ ಸಾರಿಗೆಗಳು ಪೆರಾಜೆಯಲ್ಲಿ ಪ್ರಯಾಣಿಕರನ್ನು ಹತ್ತಿ/ಇಳಿಸಿಕೊಂಡು ಕಾರ್ಯಾಚರಿಸುವಂತೆ ಚಾಲಕ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಈ ಸೂಚನೆಯನ್ನು ನಿಗಮದ ಪುತ್ತೂರು, ಬಿ.ಸಿ.ರೋಡ್, ಧರ್ಮಸ್ಥಳ, ಮಡಿಕೇರಿ ಘಟಕಗಳಿಗೂ ರವಾನಿಸಲಾಗಿದೆ.