ಏನೆಕಲ್: ತೀವ್ರಗೊಂಡ ಕೊಳೆರೋಗ
ಸುಬ್ರಹ್ಮಣ್ಯ: ಕಳೆದ ಒಂದು ವಾರದಿಂದ ಗ್ರಾಮೀಣ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ಅಡಕೆಗೆ ಕೊಳೆ ರೋಗ ಬಂದಿದೆ. ಇದರಿಂದ ಕೃಷಿಕರು ಆತಂಕಿತರಾಗಿದ್ದಾರೆ. ಏನೆಕಲ್ನ ಸುತ್ತ ಇದೀಗ ಕೊಳೆ ರೋಗ ಭೀಕರವಾಗಿ ಬಾಧಿಸಿದೆ. ಇಲ್ಲಿನ ಕೃಷಿಕರಾದ ಅಶೋಕ್ ನೆಕ್ರಾಜೆ ಅವರ 3 ಎಕರೆ ತೋಟ ಇದೀಗ ಕೊಳೆ ರೋಗಕ್ಕೆ ತುತ್ತಾಗಿದ್ದು ಸಂಪೂರ್ಣ ತೋಟವೇ ನಾಶವಾಗಿದೆ. ಇದರಿಂದಾಗಿ ಸುಮಾರು 2 ಲಕ್ಷದಷ್ಟು ನಷ್ಟ ಸಂಭವಿಸಿದೆ. ಕೇವಲ ಏನೆಕಲ್ ಮಾತ್ರವಲ್ಲದೆ ಇತರ ಕಡೆಗಳ ಅನೇಕ ಕೃಷಿಕರ ತೋಟಗಳಿಗೆ ಕೂಡಾ ಈ ರೋಗ ಬಾಧಿತವಾಗಿದ್ದು, ಕೃಷಿಕರು ತೊಂದರೆಗೆ ಈಡಾಗಿದ್ದಾರೆ. ಆದುದರಿಂದ ಸರ್ಕಾರ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಇತ್ತ ಕಡೆ ಗಮನಹರಿಸಿ ಕೃಷಿಕರ ಸಂಕಷ್ಟ ದೂರ ಮಾಡಬೇಕಾಗಿ ರೈತರು ಆಗ್ರಹಿಸಿದ್ದಾರೆ.