ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆಟೋಗೆ ಹೊಸ ಮೀಟರ್ ಶೋಧನೆ

Mainashree
Updated On : 23 Jul 2013, 10:27 am

ಮಂಗಳೂರು: ಆಟೋ ರಿಕ್ಷಾಗಳ ಪ್ರಯಾಣದರಗಳ ಚರ್ಚೆಜಾರಿಯಲ್ಲಿರುವಾಗಲೇ, ಈ ಬಗ್ಗೆ ಪಾರದರ್ಶಕ ಮತ್ತು ಮಾಹಿತಿಯುಕ್ತ ಹೊಸ ಮೀಟರ್ ಶೋಧಿಸುವ ಮೂಲಕ ಪ್ರಯಾಣಿಕರ ಸ್ನೇಹಿಯಾಗ ಹೊರಟಿದ್ದಾರೆ ಬೆಂಜಿನಪದವು ಕೆನರಾ ಕಾಲೇಜು ವಿದ್ಯಾರ್ಥಿಗಳು.
'ಡಿಸೈನ್ ಆಫ್ ಅಡ್ವಾನ್ಸ್ ್ಡ ಆಟೋಫೇರ್ ಸಿಸ್ಟಮ್ ವಿತ್ ಪ್ರಿಂಟರ್' ಎಂಬ ಹೆಸರಿನ ಈ ಯೋಜನೆಗೆ ಕ್ಲೈಂಟ್- ಸರ್ವರ್-ಎಂಬೆಡೆಡ್ ಮಾಹಿತಿ ತಂತ್ರಜ್ಞಾನ ಬಳಸಿ ರೂಪಿಸಲಾಗಿದೆ. ಇಲ್ಲಿ ಕ್ಲೈಂಟ್ ಆಟೋ ಮೀಟರ್ ಮತ್ತು ಸರ್ವರ್ ಆರ್.ಟಿ.ಒ. ಡಾಟಾ ಬೇಸ್ ಕಾರ್ಯ ನಿರ್ವಹಿಸುತ್ತವೆ. ಈ ಯೋಜನೆಯಲ್ಲಿ ಪ್ರತೀ ಆಟೋ ಚಾಲಕನೂ ಆರ್.ಟಿ.ಒ. ಇಲಾಖೆಯ ಕ್ರಮ ಸಂಖ್ಯೆ ಮತ್ತು ಪಾಸ್ವರ್ಡ್ ಹೊಂದಿರಬೇಕಾಗುತ್ತದೆ. ಪ್ರತೀ ದಿನ ಚಾಲಕ ಸೇವೆ ಶುರು ಮಾಡುವ ಮೊದಲು ಕ್ರಮಸಂಖ್ಯೆ ಮತ್ತು ಪಾಸ್ ವರ್ಡ್ ಬಳಸಿ ಲಾಗ್ ಇನ್ ಆಗುವ ಅಗತ್ಯವಿದೆ. ಈ ಡಾಟಾ ಬೇಸ್ನಲ್ಲಿ ಚಾಲಕನ ಹೆಸರು, ವೈಯಕ್ತಿಕ ಮಾಹಿತಿ, ಮೊದಲೇ ದಾಖಲು ಮಾಡಲಾಗುತ್ತದೆ. ಪ್ರಯಾಣಿಕರ ಟ್ರಿಪ್ ಶುರುವಾಗುತ್ತಿದ್ದಂತೆ ಹೊರಟ ಸ್ಥಳ, ತಲುಪಿದ ಸ್ಥಳ, ಕ್ರಮಿಸಿದ ದೂರ, ದಿನಾಂಕ, ಚಾಲಕನ ವಿವರ ಸಹಿತ ದಾಖಲಾಗುತ್ತದೆ. ಚಕ್ರದ ಆರ್.ಪಿ.ಎಂ ಬಳಸಿ ಕ್ರಮಿಸಿದ ದೂರದ ಶುಲ್ಕ ನಿಗದಿಪಡಿಸಲಾಗುತ್ತದೆ. ಈ ಮಾಹಿತಿ ವೈರ್ಲೆಸ್ ತಂತ್ರಜ್ಞಾನದ ಮೂಲಕ ಆರ್.ಟಿ.ಒ. ಡಾಟಾ ಬೇಸ್ಗೆ ಕ್ಷಣಾರ್ಧದಲ್ಲಿ ತಲುಪಿರುತ್ತದೆ. ಮೀಟರ್ನಲ್ಲಿರುವ ಎಲ್ಸಿಡಿ ಮೂಲಕ ಎಲ್ಲ ಮಾಹಿತಿಗಳನ್ನು ಪ್ರಯಾಣಿಕರು ವೀಕ್ಷಿಸಲು ಮತ್ತು ಮುದ್ರಿತ ಪ್ರತಿ ಪಡೆಯಲು ಅವಕಾಶವಿದೆ.
ಸಹ ಪ್ರಾಧ್ಯಾಪಕಿ ವಿ. ಹೇಮಲತಾ ಮಾರ್ಗದರ್ಶನದಲ್ಲಿ ವಿಭಾಗ ಮುಖ್ಯಸ್ಥ ಕೆ.ಎ. ಶಿವಕುಮಾರ್ ಮತ್ತು ಪ್ರಾಂಶುಪಾಲ ಡಾ.ನಾಗೇಶ ಪಭು ಪ್ರೋತ್ಸಾಹದೊಂದಿಗೆ ಕಂಪ್ಯೂಟರ್ ಸೈನ್ಸ್ ಅಂತಿಮ ಪದವಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಯೋಗೀಶ್ ಪೂಜಾರಿ, ಮಹಮ್ಮದ್ ಸಾಹಿಲ್ ಆರ್ ಶೇಕ್, ರೆನ್ಸನ್ ಸಂದೇಶ್ ವಾಸ್ ಮತ್ತು ಯೋಗೀಶ್ ಬಿ. ಯೋಜನೆ ರೂಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement