ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಟೋಯೋಟ ನೌಕರರ ಹಠಾತ್ ಮುಷ್ಕರ

Mainashree
Updated On : 23 Jul 2013, 10:22 am

ಮಂಗಳೂರು: ಪಡೀಲ್ ಯುನೈಟೆಡ್ ಟೋಯೋಟ ಸಂಸ್ಥೆ ನೌಕರರು ಆಡಳಿತ ಮಂಡಳಿ ವಿರುದ್ಧ ಸೋಮವಾರ ಹಠಾತ್ ಮುಷ್ಕರ ನಡೆಸಿದರು.
 ಆಡಳಿತ ಮಂಡಳಿಯ ವ್ಯವಸ್ಥಾಪಕ, ಸೇವೆ ವ್ಯವಸ್ಥಾಪಕರು ನೌಕರರ ಒಂದು ವರ್ಗದವರ ಮಾತನ್ನು ಮಾತ್ರ ಕೇಳುತ್ತಿದ್ದು, ಇನ್ನೊಂದು ವರ್ಗದ ನೌಕರರನ್ನು ಕಡೆಗಣಿಸುತ್ತಿದ್ದಾರೆ. ಇತ್ತೀಚೆಗೆ ಅನಾರೋಗ್ಯ ಪೀಡಿತ ನೌಕರರೊಬ್ಬರಿಗೆ ಹಣಕಾಸು ನೇರವು ನೀಡದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದರು. ನೌಕರರಿಗೆ ಸಂಬಳ ನೀಡದೆ ಹಲವು ದಿನಗಳಾಗಿವೆ ಎಂದು ಪ್ರತಿಭಟನೆ ಕಾರರು ಆರೋಪಿಸಿದರು. ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ರಾವ್ ಸ್ಥಳಕ್ಕೆ ಆಗಮಿಸಿದ್ದು, ಸಂವಹನ ಕೊರತೆಯೇ ಭಿನ್ನಾಭಿಪ್ರಾಯಕ್ಕೆ ಕಾರಣ. ಇದನ್ನು ಸರಿಪಡಿಸುವುದಾಗಿ ನೌಕರರಿಗೆ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement