ಪುತ್ತೂರು: ನಾಳೆ ರಾಜ್ಯಮಟ್ಟದ ವಿಚಾರ ಸಂಕಿರಣ
ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ ಯುಜಿಸಿ ಪ್ರಾಯೋಜಿತ ರಾಜ್ಯಮಟ್ಟದ ವಿಚಾರ ಸಂಕಿರಣ 24 ರಂದು ನಡೆಯಲಿದೆ. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಐಐಎಸ್ಸಿಯ ಮುಖ್ಯ ಸಂಶೋಧನಾ ವಿಜ್ಞಾನಿ ಡಾ. ಪ್ರಸಾದ್ ವಿಷ್ಣು ಭೋಟ್ಲಾ ಆಗಮಿಸಿ ಅಪ್ಲಿಕೇಷನ್ಸ್ ಆಫ್ ಮೈಕ್ರೋವೇವ್ ಆ್ಯಂಡ್ ಐಆರ್ ರೇಡಿಯೇಷನ್ಸ್ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಪ್ರಾಶುಂಪಾಲ ಡಾ. ಎಚ್. ಮಾಧವ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವ ಧಾರವಾಡ ವಿಶ್ವ ವಿದ್ಯಾನಿಲಯದ ರಸಾಯನ ಶಾಸ್ತ್ರ ನಿವೃತ್ತ ಪ್ರಾಧ್ಯಾಪಕಿ ಡಾ. ಭಾರತಿ ಬಾದಮಿ ಅಪ್ಲಿಕೇಷನ್ಸ್ ಆಫ್ ವ್ಯುವಿ- ವಿಸಿಬಲ್ ರೇಡಿಯೇಷನ್ ಎನ್ನುವ ವಿಷಯದ ಬಗ್ಗೆ, ಉಜಿರೆಯ ಎಸ್ಡಿಎಂ ಕಾಲೇಜಿನ ರಸಾಯನ ಶಾಸ್ತ್ರ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ.ಬಿ. ಶಿವರಾಮ ಹೊಳ್ಳ ಅಪ್ಲಿಕೇಷನ್ಸ್ ಆಫ್ ರೇಡಿಯೋ ಫ್ರೀಕ್ವೆನ್ಸಿ ರೇಡಿಯೇಷನ್ಸ್ ಕುರಿತಾಗಿ, ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ರೇಡಿಯೋ ಡೈಯೋಗ್ನೋಸಿಸ್ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ರಾಜಗೋಪಾಲ್ ಅಪ್ಲಿಕೇಷನ್ಸ್ ಆಫ್ ಎಕ್ಸ್ಟೆಂಡ್ ಗಾಮ ರೆಡಿಯೇಷನ್ ವಿಷಯಗಳ ಕುರಿತು ವಿಚಾರ ಮಂಡಿಸಲಿದ್ದಾರೆ.
ಸಮಾರೋಪ: ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಜಿರೆಯ ರಸಾಯನಾ ಶಾಸ್ತ್ರ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥ ಡಾ.ಬಿ. ಶಿವರಾಮ ಹೊಳ್ಳ ಆಗಮಿಸುವರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.