ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೇಜಾವರ ಶ್ರೀಗೆ ಚಂದ್ರಶೇಖರ ಸ್ವಾಮೀಜಿ ಸನ್ಮಾನ

Mainashree
Updated On : 23 Jul 2013, 10:23 am

ಮೂಲ್ಕಿ: ದೇಶದಲ್ಲಿ ಅನಾಚಾರ, ಅತ್ಯಾಚಾರಗಳು ಹೆಚ್ಚಾಗುತ್ತಿದ್ದು, ಉತ್ತರಾಖಂಡದಂತಹ ಪ್ರದೇಶಗಳಲ್ಲಿ ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಕೂಡ ಕೆಲವರು ಆಹಾರ ಪದಾರ್ಥಗಳಿಗೆ ದುಪ್ಪಟ್ಟು ಹಣ ಪಡೆಯುವ ಮೂಲಕ ತಮ್ಮ ಸಣ್ಣತನವನ್ನು ತೋರಿಸುತ್ತಿದ್ದು, ಜನತೆಗೆ ಸರಿಯಾದ ದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥರು ಹೇಳಿದರು. ಮೂಲ್ಕಿಯ ಗೇರುಕಟ್ಟೆಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜರಗಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಚಂದ್ರಶೇಖರ ಸ್ವಾಮೀಜಿಯವರು ಪೇಜಾವರ ಸ್ವಾಮೀಜಿಯನ್ನು ಫಲ, ಪುಷ್ಪ, ಕಾಣಿಕೆ ನೀಡಿ ಸನ್ಮಾನಿಸಿದರು. ರಜನಿ ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement