ಮುಂದುವರಿದ ಕಡಲ್ಕೊರೆತ: 3 ಮನೆಗೆ ಅಪಾಯ
ಸುಳ್ಯ: ಸತತ ಮಳೆಗೆ ಭಾರಿ ಗಾತ್ರದ ಮರ ಹಾಗೂ ಅಡಕೆ ಮರ ಬಿದ್ದು ಎಡಮಂಗಲ ದೋಳ್ತಿಲ ದರ್ಖಾಸು ಶಿವಪ್ಪ ಗೌಡರ ಮನೆಗೆ ಭಾಗಶಃ ಹಾನಿಯಾಗಿದೆ. ಮನೆಯ ಗೋಡೆ ಕುಸಿದಿದ್ದು, ಪಕ್ಕಾಸು, ಚಾವಣಿ ಸಿಮೆಂಟ್ ಶೀಟ್ ಹುಡಿಯಾಗಿದೆ. ಈ ಸಂದರ್ಭ ಮರ ಬಿದ್ದ ಕೋಣೆಯಲ್ಲಿದ್ದ ತೊಟ್ಟಿಲಲ್ಲಿ ಮಗು ಮಲಗಿತ್ತು. ಮಗು ಪ್ರಾಣಾಪಾಯದಿಂದ ಪಾರಾಗಿದೆ. ಸುಮಾರು ರು. 25 ಸಾವಿರ ನಷ್ಟ ಸಂಭವಿಸಿದೆ.