ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದ್ಯಾರ್ಥಿನಿ ಅತ್ಯಾಚಾರ ಯತ್ನ: ಆರೋಪಿ ಬಂಧನ

Mainashree
Updated On : 23 Jul 2013, 10:25 am

ಉಪ್ಪಿನಂಗಡಿ: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳ ಮೇಲೆ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಸಮೀಪದ ಪರಿಯಡ್ಕ ಆಲಾಜೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ರಾಮಕುಂಜದ ಶ್ರೀ ರಾಮಕುಂಜೇಶ್ವರ ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ಕಾಲ್ನಡಿಗೆಯಲ್ಲಿ ತೆರಳುತಿದ್ದಾಗ, ಆಲಾಜೆ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ವ್ಯಕ್ತಿ ಅಶ್ಲೀಲವಾಗಿ ವರ್ತಿಸಿ, ಕೈ ಹಿಡಿದು ಎಳೆದ. ಇದರಿಂದ ಭೀತಿಗೊಂಡ ವಿದ್ಯಾರ್ಥಿನಿ ಆತನ ಕೈಯಿಂದ ಬಿಡಿಸಿಕೊಂಡು, ರಕ್ಷಣೆಗಾಗಿ ಬೊಬ್ಬಿರಿಸುತ್ತಾ ಓಡಿಕೊಂಡು ಹೋದಳು.
ವಿದ್ಯಾರ್ಥಿನಿಯ ಕಿರುಚಾಟ ಕೇಳಿ ಧಾವಿಸಿ ಬಂದ ಸ್ಥಳೀಯರು, ಬೆನ್ನಟ್ಟಿಕೊಂಡು ಬರುತ್ತಿದ್ದ ಯುವಕನನ್ನು ಹಿಡಿದು, ವಿದ್ಯಾರ್ಥಿನಿಯನ್ನು ರಕ್ಷಿಸಿದರು.
ಸ್ಥಳೀಯರು ಸೆರೆ ಹಿಡಿದ ಯುವಕ ಕಲ್ಲಡ್ಕ ನಿವಾಸಿ ಅಜೀಜ್ ಎನ್ನಲಾಗಿದ್ದು, ಆತನ ಪೂರ್ಣ ಮಾಹಿತಿ ತಿಳಿದುಬಂದಿಲ್ಲ.
ಪೊಲೀಸರಿಗೆ ದೂರು: ಘಟನೆಗೆ ಸಂಬಂಧಿಸಿ ಸ್ಥಳೀಯರ ಸಕಾಲಿಕ ಯತ್ನದಿಂದಾಗಿ ರಕ್ಷಿಸಲ್ಪಟ್ಟ ವಿದ್ಯಾರ್ಥಿನಿ ತನ್ನ ತಾಯಿಯ ಜೊತೆಗೂಡಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸ್ಥಳೀಯ ನಾಗರಿಕರಿಂದ ವಶಕ್ಕೆ ಸಿಕ್ಕಿದ್ದ ಅಜೀಜ್ನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಭಿನ್ನ ಕೋಮಿಗೆ ಸೇರಿದ ವ್ಯಕ್ತಿ ಎಂದು ತಿಳಿದು ಉದ್ವಿಗ್ನತೆ ಮೂಡಿತ್ತಾದರೂ, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement