ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಲಪತಿಯಿಂದ ದಲಿತ ವಿರೋಧಿ ನೀತಿ: ದಸಂಸ

Mainashree
Updated On : 24 Jul 2013, 10:20 am

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಕೇತರ ನೌಕರರಿಗೆ ಮೀಸಲಿಟ್ಟ ಜಾಗದಲ್ಲಿ 400 ಮೀ.ಟ್ರ್ಯಾಕ್ ನಿರ್ಮಾಣ ವಿರೋಧಿಸಿದ ನೌಕರರ ಯೂನಿಯನ್ ಪದಾಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ ಕುಲಪತಿ ದಲಿತ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಪ್ರೊ.ಕೃಷ್ಣಪ್ಪ ಸ್ಥಾಪಿತ ದಸಂಸ ಪದಾಧಿಕಾರಿಗಳು ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ ನೇತೃತ್ವದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ದಲಿತ ವಿರೋಧಿ ನೀತಿ ನಡೆಸುತ್ತಿರುವ ಕುಲಪತಿ ಅವರು ಅಮಾನತು ಹಿಂಪಡೆಯದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಟ್ರ್ಯಾಕ್ ನಿರ್ಮಾಣಕ್ಕೆ ಆಕ್ಷೇಪಿಸಿದ ವಿವಿ ನೌಕರರನ್ನು ಶೋಕಾಸ್ ನೋಟಿಸ್ ನೀಡಿ ವರ್ಷದ ಹಿಂದೆ ಅಮಾನತುಗೊಳಿಸಲಾಗಿದೆ. ವರ್ಷ ಕಳೆದರೂ ಅಮಾನತು ರದ್ದು ಮಾಡಿಲ್ಲ. ಅವರ ಹೆಂಡತಿ, ಮಕ್ಕಳು ಹಿಂಸೆ ಪಡುವಂತಾಗಿದೆ ಎಂದು ದೇವದಾಸ್ ತಿಳಿಸಿದರು.  ಪದಾಧಿಕಾರಿಗಳಾದ ರ್.ಸಿ.ಅಮೀನ್, ಶೇಖರ ಹೆಜಮಾಡಿ, ರಘು ಕೆ.ಎಕ್ಕಾರ್, ಶೇಖರ್ ಚಿಲಿಂಬಿ, ಪದ್ಮಾಕ್ಷಿ, ಸರೋಜಿನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement