ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದ್ಯಾರ್ಥಿಗಳ ಸವಲತ್ತಿಗೆ ವಿರೋಧಿಸಿದ ನೌಕರರ ಅಮಾನತು ಮಾಡಿದ್ದು ಸಿಂಡಿಕೇಟ್: ಕುಲಪತಿ

Mainashree
Updated On : 24 Jul 2013, 10:21 am

ಮಂಗಳೂರು:  ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ವಿಕಸನಕ್ಕೆ ಮೈದಾನ ನಿರ್ಮಿಸಲು ಹೊರಟಾಗ ಅಡ್ಡಿ ಮಾಡಿದವರನ್ನು ವಿವಿ ಸಿಂಡಿಕೇಟ್ ಮಂಡಳಿ ಅಮಾನತು ಮಾಡಿದೆ ಎಂದು ಕುಲಪತಿ ಟಿ.ಸಿ.ಶಿವಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.  
  ವಿದ್ಯಾರ್ಥಿಗಳಿಗೆ 400 ಮೀಟರ್ ಓಟದ ಟ್ರ್ಯಾಕ್ ನಿರ್ಮಿಸಬಾರದು. ನಿರ್ಮಿಸಿದರೆ ಶಿಕ್ಷಕೇತರ ನೌಕಕರಿಗೆ ಸಮಸ್ಯೆ ಆಗುತ್ತದೆ ಎಂದು ವಿವಿ  ರಿಜಿಸ್ಟ್ರಾರ್‌ಗೆ ಪತ್ರ ಬರೆದರು. ವಿವಿ ಪ್ರಗತಿಗೆ, ವಿದ್ಯಾರ್ಥಿಗಳ ಸವಲತ್ತಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಈ ಪತ್ರ ನೋಡಿ ಸಿಂಡಿಕೇಟ್ ಸದಸ್ಯರುಸಭೆಯಲ್ಲಿ ಸ್ಪಷ್ಟನೆ ಬಯಸಿದರು.
  ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು ಕುಲಪತಿಯಲ್ಲಿ, ಸಿಂಡಿಕೇಟ್ ಸದಸ್ಯರು, ಅಮಾನತು ಅದೇಶ ಹೊರಡಿಸಿದ್ದೂ ಸಿಂಡಿಕೇಟ್ ಮಂಡಳಿ ಎಂದು ಕುಲಪತಿ ಸ್ಪಷ್ಟಪಡಿಸಿದ್ದಾರೆ.  32 ವರ್ಷದಿಂದ ವಿವಿಯಲ್ಲಿ 400 ಮೀಟರ್  ಓಟದ ಟ್ರ್ಯಾಕ್ ಇಲ್ಲ.
ಕ್ರೀಡೆಯಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂಬ ಕಾರಣಕ್ಕೆ ನ್ಯಾಕ್ ಉತ್ತಮ ಗ್ರೇಡ್ ಪಡೆಯಲು ಕಷ್ಟವಾಗುತ್ತಿದೆ. ಇತ್ತೀಚೆಗೆ ಹುಟ್ಟಿದ ವಿವಿಗಳಲ್ಲಿಯೂ ಇಂಥಾ ಟ್ರ್ಯಾಕ್ ಇದೆ.  ಸಿಂಡಿಕೇಟ್ ಮಂಡಳಿ ಕಠಿಣ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆದರಿಕೆ ತಂತ್ರವಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ ಎಂದು ಕುಲಪತಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement