ಅಂಗಡಿ ಬಂದ್
ಮಂಗಳೂರು: ಫೇಸ್ಬುಕ್ನಲ್ಲಿ ಧರ್ಮದ ಅವಹೇಳನ ನಡೆಸಿದ ಯುವಕನಿಗೆ ಹಲ್ಲೆ ಗೈದ ಬಳಿಕ ಮುಡಿಪು ಜಂಕ್ಷನ್ನಲ್ಲಿ ಒಂದು ಸಮುದಾಯಕ್ಕೆ ಸೇರಿದ ವರ್ತಕರು ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದರು.
ಘಟನೆ ಬಳಿಕ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಮುಡಿಪು, ಕಂಬಳಪದವು ಪ್ರದೇಶದಲ್ಲಿ ಬಿಗು ಬಂದೋಬಸ್ತ್ ನಡೆಸಿದರು. ಸ್ಥಳಕ್ಕೆ ಡಿಸಿಪಿ ಕೆ.ವಿ.ಜಗದೀಶ್, ಎಸಿಪಿ ರವಿ ಕುಮಾರ್, ಇನ್ಸ್ಪೆಕ್ಟರ್ ಮದನ್ ಗಾಂವ್ಕರ್ ಭೇಟಿ ನೀಡಿದ ಸ್ಥಳೀಯ ಮುಖಂಡರ ಜತೆ ಮಾತುಕತೆ ನಡೆಸಿದರು.
ಎರಡು ತಿಂಗಳ ಹಿಂದೆ !: ದರ್ಕಾಸ್ ನಿವಾಸಿ ಅಶ್ರಫ್ ಮತ್ತು ಗ್ಯಾರೇಜ್ ನೌಕರ ಪ್ರಸಾದ್ ಇಬ್ಬರು ಫೇಸ್ಬುಕ್ ಸ್ನೇಹಿತರು. ಬಹಳ ಸಮಯದಿಂದ ಅಂತರ್ಜಾಲದಲ್ಲಿ ಮಾತುಕತೆ ನಡೆಸುತ್ತಿದ್ದರು. ಇಬ್ಬರು ಎರಡು ತಿಂಗಳ ಹಿಂದೆ ನಡೆಸಿದ 'ಚಾಟ್'ನಲ್ಲಿ ಅವಹೇಳನಕಾರಿ ಅಂಶ ಇತ್ತು. ಆದರೆ ಈ ವಿಚಾರ ಗುರುವಾರ ದೊಡ್ಡದಾಗಿ ಹಬ್ಬಿದ ಪರಿಣಾಮ ಯುವಕನ ಮೇಲೆ ಹಲ್ಲೆ ನಡೆಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.