ನಾಳೆ ರಂಝಾನ್ ಪ್ರಾರ್ಥನಾ ಕೂಟ
ಮಂಗಳೂರು: ಅಲ್ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ವತಿಯಿಂದ ಜು. 28 ರಂದು ಮಂಜನಾಡಿಯಲ್ಲಿ 'ಪವಿತ್ರ ರಂಝಾನ್ ವಿಶೇಷ ಪ್ರಾರ್ಥನಾ ಕೂಟ' ನಡೆಯಲಿದೆ. ಪ್ರಾರ್ಥನಾ ಕೂಟವನ್ನು ಅಲ್ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಸಂಯುಕ್ತ ಖಾಝಿ ಶೈಖುನಾ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸುವರು. ಹುಸೈನ್ ಕೆ.ಸಿ. ರೋಡ್ ಹಾಗೂ ಅಬ್ದುಲ್ ಖಾದಿರ್ ಸಖಾಫಿ ಅವರು ರಂಝಾನ್ ಪ್ರಾರ್ಥನೆ ನಡೆಸಿಕೊಡುವರು ಎಂದು ಸಂಘದ ಸದಸ್ಯ ಕೆ.ಎಂ.ಕೆ. ಮಂಜನಾಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದೇ ಸಂದರ್ಭ ಅನಾಥ ಹುಡುಗಿಯ ಉಚಿತ ವಿವಾಹ ನಡೆಸಿಕೊಡಲಾಗುತ್ತದೆ. ನಂತರ ಸಾಮೂಹಿಕ ಇಪ್ತಾರ್ ಕೂಟ ನಡೆಯಲಿದೆ ಎಂದರು.