ಮಾಣಿ: ರಾ.ಹೆ.75ಕ್ಕೆ ಮರ ಬಿದ್ದು ಸಂಚಾರ ವ್ಯತ್ಯಯ
ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮಾಣಿ ಬುಡೋಳಿ ಸಮೀಪ ಮರವೊಂದು ಹೆದ್ದಾರಿಗೆ ಬಿದ್ದ ಪರಿಣಾಮ ಸುಮಾರು ಒಂದು ತಾಸು ಸಂಚಾರ ಸ್ಥಗಿತಗೊಂಡ ಘಟನೆ ಶುಕ್ರವಾರ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ವೇಳೆಗೆ ಬೀಸಿದ ಭಾರಿ ಗಾಳಿಗೆ ಮಾಣಿ ಸಮೀಪದ ಬುಡೋಳಿ ರಸ್ತೆ ಬದಿಯಲ್ಲಿದ್ದ ಉಳಿ ಮರವು ಕುಸಿದು ರಸ್ತೆ ಮಧ್ಯಕ್ಕೆ ಉರುಳಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದ್ದು, ವಾಹನಗಳು ತೆರಳಲಾಗದೆ ಪ್ರಯಾಣಿಕರು ಪರದಾಡುವಂತಾಯಿತು. ಸಾರ್ವಜನಿಕರು ಹಾಗೂ ಮಾಣಿ ಪರಿಸರದ ವಾಹನ ಚಾಲಕರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ರಸ್ತೆ ಮಧ್ಯದಲ್ಲಿದ್ದ ಮರ ತೆರವುಗೊಳಿಸಿದ್ದಾರೆ.