ಸುಳ್ಯದಲ್ಲಿ ಭಾರಿ ಮಳೆ: ಹಲವೆಡೆ ಭೂ ಕುಸಿತ
ಸುಳ್ಯ: ಸುಳ್ಯ ಮತ್ತು ಪರಿಸರದಲ್ಲಿ ಮತ್ತೆ ಭಾರಿ ಮಳೆ ಸುರಿಯುತ್ತಿದ್ದು ಹಲವೆಡೆ ರಸ್ತೆ ಬದಿ ಭೂ ಕುಸಿತ ಉಂಟಾಗಿದೆ.
ಅರಂತೋಡು ಬಳಿಯ ಕುಲ್ಚಾರು ಎಂಬಲ್ಲಿ ರಸ್ತೆ ಬದಿ ಕುಸಿದು ಆಳವಾದ ಪ್ರಪಾತ ಉಂಟಾಗಿದ್ದು ಮಾಣಿ ಮೈಸೂರು ರಾಜ್ಯ ಹೆದ್ದಾರಿಗೆ ಆತಂಕ ಉಂಟಾಗಿದೆ.
ನಾರ್ಣಕಜೆ ಸಮೀಪದ ಜಬಳೆ ಎಂಬಲ್ಲಿಯೂ ರಸ್ತೆ ಬದಿ ಕುಸಿದು ಆತಂಕ ಎದುರಾಗಿದೆ.
ಭಾರಿ ಮಳೆಯಿಂದಾಗಿ ರಸ್ತೆ ತುಂಬ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾಯಿತು.