ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಂಕಿತ ಡೆಂಘೀ ಜ್ವರಕ್ಕೆ ಇಬ್ಬರು ಬಾಲಕಿಯರು ಬಲಿ

Lingaraj Badiger
Updated On : 29 Jul 2013, 11:53 am

ಶ್ರೀರಂಗಪಟ್ಟಣ: ಶಂಕಿತ ಡೆಂಘೀ ಜ್ವರದಿಂದ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗಂಜಾಂ ಮತ್ತು ಹಂಪಾಪುರ ಗ್ರಾಮಗಳಲ್ಲಿ ನಡೆದಿದೆ. ಗಂಜಾಂ ಗ್ರಾಮದ ಅಂಬೇಡ್ಕರ್ ರಸ್ತೆಯಲ್ಲಿ ವಾಸವಿದ್ದ ಕೌಸರ್ ಮತ್ತು ಚಾಂದ್ ಪಾಷರ ಪುತ್ರಿ ಕುಲ್ನಮ್ ಭಾನು(4), ತಾಲೂಕಿನ ಹಂಪಾಪುರ ಗ್ರಾಮದ ಸುರೇಶ್ ಮತ್ತು ವಸಂತ ದಂಪತಿಗಳ ಪುತ್ರಿ ಮಾನಸ (5) ಶಂಕಿತ ಡೆಂಘೀ ಜ್ವರದಿಂದ ಮೃತರಾದ ಬಾಲಕಿಯರು. ಕುಲ್ನಮ್ ಭಾನು ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮಾನಸ ಮೈಸೂರಿನ ಕೊಲಂಬಿಯ ಏಷಿಯಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.   
ತೋಳ ದಾಳಿ: 22
ಕುರಿ ಮರಿ ಸಾವು
ಗದಗ: ದೊಡ್ಡಿಯಲ್ಲಿದ್ದ ಕುರಿಮರಿಗಳ ಮೇಲೆ ತೋಳ ದಾಳಿ ಮಾಡಿ 22 ಕುರಿಮರಿಗಳನ್ನು ಕೊಂದುಹಾಕಿದ ಘಟನೆ ಭಾನುವಾರ ಸಂಜೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಂಬಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕುರಿಮರಿಗಳು ಬೀರಪ್ಪ ಪೂಜಾರ ಹಾಗೂ ಶಿವಪುತ್ರಪ್ಪ ಕಾತರಕಿ ಎಂಬುವವರಿಗೆ ಸೇರಿದವು ಎನ್ನಲಾಗಿದ್ದು, ಭಾನುವಾರ ಸಂಜೆ ತೋಳ ದಾಳಿ ನಡೆಸಿದೆ.

ಸೋಮವಾರಪೇಟೆ ಪತ್ರಕರ್ತರ ಸಂಘ ಮಹಾಸಭೆ
ಸೋಮವಾರಪೇಟೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಇಲ್ಲಿನ ಪತ್ರಿಕಾ ಭವನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷ ಸಯ್ಯದ್ ಇರ್ಫಾನ್ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಪತ್ರಕರ್ತರ ಸಂಘದಿಂದ ವೀಕ್ಷಕರಾಗಿ ಆಗಮಿಸಿದ್ದ ಪಳೆಯಂಡ ಪಾರ್ಥ ಚಿಣ್ಣಪ್ಪ, ರಾಜ್ಯ ಸಂಘದ ನಿರ್ದೇಶಕ ಎಸ್. ಮಹೇಶ್, ತಾಲೂಕು ಸಂಘದ ಉಪಾಧ್ಯಕ್ಷ ಎಸ್.ಜಿ. ನರೇಶ್ವಂದ್ರ ಇದ್ದರು. ಸಂಘದ ಕಾರ್ಯದರ್ಶಿ ದಿನೇಶ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ವಿಜಯ್ ಹಾನಗಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement