ಸಿಪಿಎಂ ಮುಖಂಡ ಶೀನ ಬಂಗೇರ
ಬಂಟ್ವಾಳ: ಸಿಪಿಎಂ ಮುಖಂಡ ಶೀನ ಬಂಗೇರ (58) ಭಾನುವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಬಂಟ್ವಾಳ ಮಂಡಾಡಿ- ಅರ್ಬಿಗುಡ್ಡೆ ನಿವಾಸಿಯಾಗಿರುವ ಇವರು ಕಳೆದ 40 ವರ್ಷಗಳಿಂದ ಸಿಪಿಎಂ ಪಕ್ಷದ ವಿವಿಧ ಹುದ್ದೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ತಾಲೂಕು ಹಾಗೂ ಜಿಲ್ಲೆಯ ಹಲವು ಜನಪರ ಹಾಗೂ ಕಾರ್ಮಿಕ ಚಳುವಳಿಗಳಲ್ಲಿ ಭಾಗವಹಿಸಿದ್ದರು. ತಾಲೂಕು ಸಿಪಿಎಂ ಸದಸ್ಯರಾಗಿದ್ದ ಇವರು ಬೀಡಿ ಕೆಲಸಗಾರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘ ಬಂಟ್ವಾಳ ಘಟಕದ ಉಪಾಧ್ಯಕ್ಷರಾಗಿದ್ದರು. ಪಕ್ಷದ ಹಾಗೂ ಸಂಘಟನೆಗಳ ಜಿಲ್ಲಾ ಸಮಿತಿಗಳಲ್ಲೂ ಸದಸ್ಯತ್ವವನ್ನು ಪಡೆದಿದ್ದ ಶೀನ ಬಂಗೇರ ಮ್ಯೂನಿಸ್ಟ್ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದರು.
ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಗಣ್ಯರ ಸಂತಾಪ- ಸಿಪಿಎಂ ಪ್ರಮುಖರಾದ ವಸಂತ ಆಚಾರ್ಯ, ಬಿ.ಎಂ. ಭಟ್, ಕೃಷ್ಣಪ್ಪ ಸಾಲಿಯಾನ್, ಬಿ. ವಾಸು ಗಟ್ಟಿ, ರಾಮಣ್ಣ ವಿಟ್ಲ ಸಹಿತ ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಮೃತರ ಮನೆಗೆ ಭೇಟಿ ನೀಡಿ, ಮೃತರ ಅಂತಿಮ ದರ್ಶನ ಪಡೆದರು.