ಸುಳ್ಯದಲ್ಲಿ ವಿಶ್ವ ಗೌಡ ಸಮ್ಮೇಳನಕ್ಕೆ ಚಿಂತನೆ: ದಿನೇಶ್ ಮಡಪ್ಪಾಡಿ
ಸುಳ್ಯ: ಸುಳ್ಯದಲ್ಲಿ 2015ರಲ್ಲಿ ವಿಶ್ವ ಗೌಡ ಸಮ್ಮೇಳನ ನಡೆಸುವ ಕುರಿತು ಚಿಂತನೆ ಇರುವುದಾಗಿ ಸುಳ್ಯ ತಾಲೂಕು ಗೌಡರ ಯುವಸೇವಾ ಸಂಘದ ನೂತನ ಸಂಘದ ನೂತನ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಹೇಳಿದ್ದಾರೆ. ಭಾನುವಾರ ಕೊಡಿಯಾಲಬೈಲಿನ ಎಂ.ಜಿ.ಎಂ. ಪ್ರೌಢಶಾಲೆಯಲ್ಲಿ ಗೌಡರ ಯುವಸೇವಾ ಸಂಘ ಸುಳ್ಯ ಹಾಗೂ ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಸುಳ್ಯ ವತಿಯಿಂದ ನಡೆದ ಯುವ ಸೇವಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ಕಾರ್ಯಕ್ರಮಗಳ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ.ಕ. ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಸಿಯೂಟ ಯೋಜನೆಗೆ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಪಿ.ಕೆ. ಉಮೇಶ್ ಚಾಲನೆ ನೀಡಿದರು. ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಪ್ರತಿಭಾ ಪುರಸ್ಕಾರ ವಿತರಿಸಿದರು. ಪಿ.ಸಿ. ಜಯರಾಮ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮೋಹನ್ ರಾಂ ಸುಳ್ಳಿ ವಂದಿಸಿದರು.