ಬಿಸಿಯೂಟದಲ್ಲಿ ಹೆಗ್ಗಣ ಪತ್ತೆ
ಮಂಗಳೂರು: ಸುರತ್ಕಲ್ ಸಮೀಪದ ಕೃಷ್ಣಾಪುರ 5ನೇ ಬ್ಲಾಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಿದ್ಧಪಡಿಸಿದ ಬಿಸಿಯೂಟದಲ್ಲಿ ಸತ್ತ ಹೆಗ್ಗಣ ಪತ್ತೆಯಾಗಿದೆ. ಶಾಲೆಗೆ ಖಾಸಗಿ ಸಂಸ್ಥೆ ಬಿಸಿಯೂಟ ನೀಡುತ್ತಿದೆ. ಸೋಮವಾರ ಮಧ್ಯಾಹ್ನ ಬಿಸಿಯೂಟದಲ್ಲಿ ಸತ್ತ ಹೆಗ್ಗಣ ಪತ್ತೆಯಾದ ತಕ್ಷಣ ಮಕ್ಕಳಿಗೆ ಊಟ ನೀಡದಂತೆ ಮುಖ್ಯ ಶಿಕ್ಷಕರು ಸೂಚಿಸಿದರು.
ಟಿಪ್ಪರ್ ಕಳವು
ಮಂಗಳೂರು: ಮಂಜನಾಡಿ ಕಲ್ಕಟ್ಟ ಎಂಬಲ್ಲಿ ಕುಂಞ ಬಾವು ಹಳೆ ಮನೆ ಮುಂಭಾಗ ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿ ಕಳವಾಗಿದೆ. ಟಿಪ್ಪರ್ ಮಾಲೀಕ ಆಗ್ನೇಸ್ ಕಾಲೇಜ್ ಬಳಿ ನಿವಾಸಿ ಮಹಮ್ಮದ್ ಸಮೀರ್ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.