ಬೆಂಕಿ ತಗುಲಿ ಯುವತಿ ಅನುಮಾನಾಸ್ಪದ ಸಾವು
ಹಿರಿಯಡ್ಕ: ಇಲ್ಲಿನ ಕುಕ್ಕೆಹಳ್ಳಿ ಗ್ರಾಮದಲ್ಲಿ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಬೆಂಕಿ ತಗಲಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಸರಿತಾ (18) ಮೃತಳು. ಈಕೆ, ಮೂಲತಃ ಧಾರವಾಡದಿಂದ ಇಲ್ಲಿಗೆ ವಲಸೆ ಕಾರ್ಮಿಕರಾಗಿ ಬಂದ ರುಕ್ಮಿಣಿ ಎಂಬವರ ಮಗಳು.
ಘಟನೆ ವಿವರ: ಸರಿತಾ ಸಂಜೆ 4 ಗಂಟೆಗೆ ಸ್ಥಳೀಯ ಅಂಗಡಿಗೆ ಹೋಗಿ ಮನೆಗೆ ಸಾಮಾನು ತಂದಿದ್ದಳು, ಸಂಜೆ 7 ಗಂಟೆಗೆ ಮನೆಯ ಬಳಿ ಆಕೆಯ ಶವ ಪತ್ತೆಯಾಗಿದೆ. ಶವ ಅರೆಬರೆ ಸುಟ್ಟು ಹೋಗಿದೆ. ಆಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸತ್ತಳೋ ಅಥವಾ ಆತ್ಮಹತ್ಯೆ ಮಾಡಿಕೊಂಡಳೋ ಅಥವಾ ಇದು ಕೊಲೆಯೋ ಎಂಬುದು ಪತ್ತೆಯಾಗಬೇಕಾಗಿದೆ. ತಾಯಿ ರುಕ್ಮಿಣಿ ಸ್ಥಳೀಯ ಗೇರು ಬೀಜ ಫಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ, ತಂದೆ 3 ತಿಂಗಳ ಹಿಂದೆ ಇಲ್ಲಿಯೇ ತೀರಿ ಹೋಗಿದ್ದಾರೆ. ಸಹೋದರ ಸುಕುಮಾರ ಮತ್ತು ಸಹೋದರಿ ಸುನಿತಾ ಧಾರವಾಡದಲ್ಲಿಯೇ ಇದ್ದು ಶಾಲೆಗೆ ಹೋಗುತ್ತಿದ್ದಾರೆ. ಹಿರಿಯಡ್ಕ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.