ಕಯ್ಯಾರಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಪುನರೂರು ಒತ್ತಾಯ
ಮೂಲ್ಕಿ: ಕನ್ನಡಕ್ಕಾಗಿ ತನ್ನ ಜೀವನ ಮುಡಿಪಾಗಿಟ್ಟಿರುವ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಂಞ್ಞಣ್ಣ ರೈ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ 13 ಶಾಸಕರಿದ್ದು, ಇಬ್ಬರು ಸಂಸದರಿದ್ದಾರೆ. ಶಾಸಕರು ವಿಧಾನಸಭೆಯಲ್ಲಿ ಕಯ್ಯಾರರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸದಿರುವುದು ವಿಷಾದನೀಯ. ಹೊರ ಜಿಲ್ಲೆಯ ರಾಮಚಂದ್ರ ಗೌಡರು ಈ ಬಗ್ಗೆ ಪ್ರಸ್ತಾಪಿಸಿದ್ದು, ಸಚಿವ ಎಸ್.ಆರ್. ಪಾಟೀಲ್ ಭರವಸೆ ನೀಡಿದ್ದಾರೆ. ಈಗಾಗಲೇ 99 ವರ್ಷವಾಗಿರುವ ಕಯ್ಯಾರ ಅವರನ್ನು ಹೆಚ್ಚು ಸಮಯ ಕಾಯಿಸದೆ ಅವರ ಜೀವಂತ ಅವಧಿಯಲ್ಲೇ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಪುನರೂರು ಒತ್ತಾಯಿಸಿದ್ದಾರೆ.