ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುದ್ಕೋಳಿಯಲ್ಲಿ ಕಾಡುಕೋಣಗಳು ಪ್ರತ್ಯಕ್ಷ

Lingaraj Badiger
Updated On : 31 Jul 2013, 11:19 am

ಬಂಟ್ವಾಳ: ಕಾಡುಕೋಣಗಳೆರಡು ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಘಟನೆ ಮಂಗಳವಾರ ಸಂಜೆ ರಾಯಿ ಗ್ರಾಮದ ಕುದ್ಕೋಳಿಯಲ್ಲಿ ನಡೆದಿದೆ.
ಬಂಟ್ವಾಳ- ಮೂಡುಬಿದಿರೆ ರಾಜ್ಯ ಹೆದ್ದಾರಿ ಬಳಿಯ ಕುದ್ಕೋಳಿ ಪರಿಸರದಲ್ಲಿ ದಿಢೀರ್ ಕಾಣಿಸಿಕೊಂಡ ಕಾಡುಕೋಣಗಳು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದವು. ಮನುಷ್ಯರನ್ನು ಕಂಡ ಕೂಡಲೆ ಕಾಡುಕೋಣಗಳು ಪಕ್ಕದ ಗುಡ್ಡಕ್ಕೆ ತೆರಳಿ ಕಣ್ಮರೆಯಾದವು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗೆ ಕಾಡುಕೋಣಗಳು ಮರೆಯಾಗಿದ್ದವು. ಕಳೆದೆರಡು ದಿನಗಳ ಹಿಂದೆ ಸ್ಥಳೀಯ ಪರಿಸರದ ಕೆಲವು ಜಮೀನಿನಲ್ಲಿ ಕಾಡುಕೋಣ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಕಾಡುಕೋಣಗಳು ವಿನಾಕಾರಣ ಮನುಷ್ಯರಿಗೆ ತೊಂದರೆ ನೀಡುವುದಿಲ್ಲ. ಈ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಕಾಡಿನಿಂದ ಕಾಡಿಗೆ ಅಲೆದಾಡುವಾಗ ಆಕಸ್ಮಿಕವಾಗಿ ಜನರಿಗೆ ಕಾಣಸಿಗುತ್ತವೆ. ಅವುಗಳಿಗೆ ಉಪಟಳ ನೀಡಬಾರದು ಎಂದು ಅರಣ್ಯ ಇಲಾಖಾಧಿಕಾರಿ ಸುಬ್ರಹ್ಮಣ್ಯ ರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement