ದ.ಕ: ಬತ್ತ ಕೃಷಿ ಶೇ.80 ಪ್ರಗತಿ
ಮಂಗಳೂರು: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 33500 ಹೆಕ್ಟೇರ್ನಲ್ಲಿ 92125 ಟನ್ ಬತ್ತ ಉತ್ಪಾದಿಸುವ ಗುರಿ ಹೊಂದಲಾಗಿದೆ. ಜು.28ರ ವರೆಗೆ 27008 ಹೆಕ್ಟೇರ್ನಲ್ಲಿ ಕೃಷಿ ಚಟುವಟಿಕೆ ಪೂರ್ಣಗೊಂಡಿದ್ದು, ಶೇ.80.6 ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 23513 ಹೆಕ್ಟೇರ್ನಲ್ಲಿ ಕೃಷಿ ಕಾರ್ಯ ನಡೆದಿತ್ತು.
ಮಂಗಳೂರು ತಾಲೂಕಿನಲ್ಲಿ ಒಟ್ಟು 11800 ಹೆಕ್ಟೇರ್ನಲ್ಲಿ ಬತ್ತ ಬೆಳೆಯುವ ಗುರಿ ಇದ್ದು, ಈವರೆಗೆ 9367 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ಪೂರ್ತಿಯಾಗಿದೆ. ಸುಳ್ಯದಲ್ಲಿ 500 ಹೆಕ್ಟೇರ್ನಲ್ಲಿ 489 ಹೆಕ್ಟೇರ್ ನಾಟಿ ಮಾಡಿ ಶೇ.98 ಗುರಿ ಸಾಧಿಸಲಾಗಿದೆ. ಬಂಟ್ವಾಳದಲ್ಲಿ 9500 ಹೆಕ್ಟೇರ್ನಲ್ಲಿ 7420 ಹೆಕ್ಟೇರ್ ನಾಟಿಯಾಗಿ ಶೇ.78 ಗುರಿ ಸಾಧಿಸಲಾಗಿದೆ.
ಬೆಳ್ತಂಗಡಿಯಲ್ಲಿ 8500 ಹೆಕ್ಟೇರ್ ಪೈಕಿ 6932 ಹೆಕ್ಟೇರ್ ನಾಟಿ ಮಾಡಿ ಶೇ.81 ಗುರಿ ಸಾಧನೆಯಾಗಿದೆ. ಪುತ್ತೂರಲ್ಲಿ 3200 ಹೆಕ್ಟೇರ್ನಲ್ಲಿ 2800 ಹೆಕ್ಟೇರ್ ನಾಟಿ ಮಾಡಿದ್ದು, ಶೇ.78 ಗುರಿ ಸಾಧನೆಯಾಗಿದೆ. ಮುಂಗಾರಿನಲ್ಲಿ 8 ಸಾವಿರ ಟನ್ ರಸಗೊಬ್ಬರ ಬೇಡಿಕೆ ಇದ್ದು, 9463 ಟನ್ ರಸಗೊಬ್ಬರ ವಿತರಿಸಲಾಗಿದೆ. 5900 ಟನ್ ರಸಗೊಬ್ಬರ ದಾಸ್ತಾನಿದೆ. ಜಿಲ್ಲೆಯಲ್ಲಿ ಒಟ್ಟು 2600 ಹೆಕ್ಟೇರ್ನಲ್ಲಿ ಭೂಚೇತನಾ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ.
ಬಿತ್ತನೆ ಬೀಜ ದಾಸ್ತಾನು: ಬಿತ್ತನೆ ಬೀಜ ಪ್ರಮಾಣ ಸಾಕಷ್ಟಿದ್ದು, ಈವರೆಗೆ 459.50 ಕ್ವಿಂಟಾಲ್ನಷ್ಟು ಬೀಜಗಳನ್ನು ರೈತ ಸಂಪರ್ಕ ಕೇಂದ್ರ ಮುಖೇನ 1274 ರೈತರಿಗೆ ವಿತರಿಸಲಾಗಿದೆ. ಕ್ವಿಂಟಾಲಿಗೆ ಶೇ.50ರಂತೆ ರು. 700 ರಿಯಾಯ್ತಿಯಲ್ಲಿ ಪ್ರಮಾಣಿತ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮುಖೇನ ವಿತರಿಸಲಾಗುತ್ತಿದೆ. 459.50 ಕ್ವಿಂಟಾಲ್ ಬೀಜ ವಿತರಿಸಲಾಗಿದೆ ಎಂದು ಜಂಟಿ ಕೃಷಿ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.