ಪಾಲಕ್ಕಾಡ್-ಎರ್ನಾಕುಲಂ ಹೊಸ ರೈಲು
ಮಂಗಳೂರು: ಕೇರಳದ ಪಾಲಕ್ಕಾಡ್ ಜಂಕ್ಷನ್-ಎರ್ನಾಕುಲಂ ಮೆಮು ಪ್ಯಾಸೆಂಜರ್ (ನಂ.66611/66611)ರೈಲು ಸಂಚಾರಕ್ಕೆ ಪಾಲಕ್ಕಾಡ್ ಜಂಕ್ಷನ್ ನಿಲ್ದಾಣದಲ್ಲಿ ಸಂಸದ ಎಂ.ಬಿ. ರಾಜೇಶ್ ಶುಕ್ರವಾರ ಹಸಿರು ನಿಶಾನೆ ತೋರಿಸಿದರು.
ಈ ರೈಲು ಪಾಲಕ್ಕಾಡ್ ಜಂಕ್ಷನ್ನಿಂದ ಬೆಳಗ್ಗೆ 8.45ಕ್ಕೆ ಹೊರಟು ಮಧ್ಯಾಹ್ನ 12.55ಕ್ಕೆ ಎರ್ನಾಕುಲಂ ನಿಲ್ದಾಣಕ್ಕೆ. ಅಲ್ಲಿಂದ ಸಂಜೆ 3.10ಕ್ಕೆ ಹೊರಟು ರಾತ್ರಿ 7.25ಕ್ಕೆ ಪಾಲಕ್ಕಾಡ್ ತಲುಪಲಿದೆ. ಪಾಲಕ್ಕಾಡ್ ಜಂಕ್ಷನ್ ಮತ್ತು ಎರ್ನಾಕುಲಂ ನಡುವಿನ ಎಲ್ಲ ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನ ಈ ರೈಲು ಸಂಚರಿಸಲಿದ್ದು, ಶೋರ್ನೂರ್ ಜಂಕ್ಷನ್ನ್ನು ಸಂಪರ್ಕಿಸುವುದಿಲ್ಲ. ಪಾಲಕ್ಕಾಡ್ ವಿಭಾಗೀಯ ಮುಖ್ಯಸ್ಥ ಪೀಯೂಶ್ ಅಗರ್ವಾಲ್ ಮಾತನಾಡಿ, ಪಾಲಕ್ಕಾಡ್ ನಿಲ್ದಾಣದಲ್ಲಿ 2 ಲಿಫ್ಟ್ ಮತ್ತು 1 ಎಸ್ಕಲೇಟರ್ ವ್ಯವಸ್ಥೆ ಕಲ್ಪಿಸಲಾಗುವುದು. ಪಾಲಕ್ಕಾಡ್ ಜಂಕ್ಷನ್ನಲ್ಲಿ 4 ಟಚ್ ಸ್ಕ್ರೀನ್ ಅಳವಡಿಸಲಾಗುವುದು. ಇದರಲ್ಲಿ ರಿಸರ್ವೇಷನ್ ಕೌಂಟರ್ ಮತ್ತು ರೈಲು ಚಲಿಸುವ ಸಮಯದ ವಿವರ ಸಿಗಲಿದೆ. ಕಾಂಜಿಗೋಡ್ ಕಡೆಗೆ ಫ್ಲ್ಯಾಟ್ಫಾರಂ ನಂ.3 ಮತ್ತು 4ಕ್ಕೆ ಫ್ಲ್ಯಾಟ್ಫಾರಂ ಶೆಲ್ಟರ್ ವಿಸ್ತರಿಸಲಾಗುವುದು ಎಂದರು.
--