ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

4ರಂದು ಛಾಯಾಗ್ರಾಹಕರ ಕ್ರೀಡಾಕೂಟ

Lingaraj Badiger
Updated On : 1 Aug 2013, 11:59 am

ಬಂಟ್ವಾಳ: ದ.ಕ. ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ವತಿಯಿಂದ ಛಾಯಾಗ್ರಾಹಕರ ಜಿಲ್ಲಾ ವಾರ್ಷಿಕ ಕ್ರೀಡಾಕೂಟ, ಕೆಸರುಗದ್ದೆ ಹಾಗೂ ಛಾಯಾಗ್ರಾಹಕರ ವಾಹನ ಜಾಥಾ ಕಾರ್ಯಕ್ರಮ ಆ.4ರಂದು ಪುಳಿತ್ತಡಿ- ಉಪ್ಪಿನಂಗಡಿಯಲ್ಲಿ ಆಯೋಜಿಸಲಾಗಿದೆ. ಛಾಯಾಗ್ರಾಹಕರ ವಾಹನ ಜಾಥಾವನ್ನು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಉದ್ಘಾಟಿಸುವರು. ಕೆಸರುಗದ್ದೆ ಕ್ರೀಡಾಕೂಟದ ಉದ್ಘಾಟನೆಯನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಅಭಯಚಂದ್ರ ಜೈನ್ ನೆರವೇರಿಸುವರು. ಶಾಸಕಿ ಶಕುಂತಳಾ ಟಿ. ಶೆಟ್ಟಿ, ಯೂನಿಯನ್ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಉಡುಪಿ, ಎಸ್.ಆರ್. ರಂಗಮೂರ್ತಿ, ಕೇಶವ ಗೌಡ ಬಜತ್ತೂರು, ಉಮೇಶ್ ಶೆಣೈ, ನಳಿನಾಕ್ಷಿ ಪಿ.ಶೆಟ್ಟಿ, ಸುರೇಶ್ ಅತ್ರಿಮಜಲು, ಅಸ್ಟ್ರೋ ಮೋಹನ್ ಉಡುಪಿ, ವಿಠಲ್ ಚೌಟ, ಪೊನ್ನಪ್ಪ, ಹರೀಶ್ ಪುಣಚ  ಭಾಗವಹಿಸಲಿರುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement