ಕರ್ಣಾಟಕ ಬ್ಯಾಂಕ್ 94.17 ಕೋಟಿ ನಿವ್ವಳ ಲಾಭ
ಮಂಗಳೂರು: ಕರ್ಣಾಟಕ ಬ್ಯಾಂಕ್ 2013-14ನೇ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ರು. 94.17 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಹಿಂದಿನ ವರ್ಷದ ರು. 83.43 ಕೋಟಿ ಲಾಭವನ್ನು ಮೀರಿದ್ದು ಶೇ.12.87 ಪ್ರಗತಿ ದಾಖಲಿಸಿದೆ. ರು. 62,158.99 ಕೋಟಿ ವಹಿವಾಟು ದಾಖಲಿಸಿ ಶೇ.14.63 ಪ್ರಗತಿ ಕಾಣಿಸಿದೆ. ಠೇವಣಿಯಲ್ಲಿ ರು. 4,368.03 ಕೋಟಿ ಸಾಧಿಸಿ ಶೇ.13.42 ಪ್ರಗತಿ ದಾಖಲಿಸಿದೆ. ಮುಂಗಡ ರು. 21,677.57 ಕೋಟಿಯಿಂದ ರು. 25,244.37 ಕೋಟಿ ಏರಿಕೆಯಾಗಿದ್ದು, ಶೇ.16.45 ಪ್ರಗತಿಯಾಗಿದೆ. ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಯಲ್ಲಿ ಮೊತ್ತ ರು. 7,694.08 ಕೋಟಿಯಿಂದ ರು. 8,759.11 ಕೋಟಿಗೆ ಹೆಚ್ಚಳವಾಗಿದ್ದು, ಶೇ.13.84 ಪ್ರಗತಿ ಕಂಡಿದೆ.
--