ಕರ್ಣಾಟಕ ಬ್ಯಾಂಕ್ ತ್ರೈಮಾಸಿಕ: ರು. 94.17 ಕೋಟಿ ನಿವ್ವಳ ಲಾಭ
ಮಂಗಳೂರು: ಕರ್ಣಾಟಕ ಬ್ಯಾಂಕ್ 2013-14ನೇ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ರು. 94.17 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಹಿಂದಿನ ವರ್ಷದ ರು. 83.43 ಕೋಟಿ ಲಾಭವನ್ನು ಮೀರಿದ್ದು ಶೇ.12.87 ಪ್ರಗತಿ ದಾಖಲಿಸಿದೆ.
ರು. 62,158.99 ಕೋಟಿ ವಹಿವಾಟು ದಾಖಲಿಸಿ ಶೇ.14.63 ಪ್ರಗತಿ ಕಾಣಿಸಿದೆ. ಠೇವಣಿಯಲ್ಲಿ ರು. 4,368.03 ಕೋಟಿ ಸಾಧಿಸಿ ಶೇ.13.42 ಪ್ರಗತಿ ದಾಖಲಿಸಿದೆ. ಮುಂಗಡ ರು. 21,677.57 ಕೋಟಿಯಿಂದ ರು. 25,244.37 ಕೋಟಿ ಏರಿಕೆಯಾಗಿದ್ದು, ಶೇ.16.45 ಪ್ರಗತಿಯಾಗಿದೆ. ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಯಲ್ಲಿ ಮೊತ್ತ ರು. 7,694.08 ಕೋಟಿಯಿಂದ ರು. 8,759.11 ಕೋಟಿಗೆ ಹೆಚ್ಚಳವಾಗಿದ್ದು, ಶೇ.13.84 ಪ್ರಗತಿ ಕಂಡಿದೆ.
ಒಟ್ಟು ಬ್ಯಾಂಕಿನ ಆದಾಯ ರು. 988.66 ಕೋಟಿಯಿಂದ ರು. 1203.80 ಕೋಟಿಗೆ ಏರಿಕೆಯಾಗಿ ಶೇ.21.76 ಸಾಧನೆ ತೋರಿಸಿದೆ. ಪರಿಣಾಮಕಾರಿ ಲಾಭ ರು. 168.94 ಕೋಟಿಯಿಂದ ರು. 257.51 ಕೋಟಿಗೆ ಹೆಚ್ಚಳವಾಗಿದ್ದು, ಶೇ.52.43 ಪ್ರಗತಿ ಸಾಧಿಸಿದೆ. ನಿವ್ವಳ ಬಡ್ಡಿ ಆದಾಯ ರು. 221.88 ಕೋಟಿಯಿಂದ ರು. 250.10 ಕೋಟಿ ತಲಪಿ ಶೇ.12.72 ಪ್ರಗತಿ ದಾಖಲಾಗಿದೆ. ಬಂಡವಾಳ ಸಮಾನುಪಾತ ಶೇ.14.08 ಆಗಿದ್ದು, ಇದರ ಸಾಮಾನ್ಯ ಅನುಪಾತ ಶೇ.9 ಆಗಿದೆ. ಬ್ಯಾಂಕ್ 30 ಸೇವಾ ಕೇಂದ್ರಗಳನ್ನು ತೆರೆದಿದ್ದು, 5 ಹೊಸ ಶಾಖೆ ಹಾಗೂ 25 ಎಟಿಎಂ ಪ್ರಾರಂಭಿಸಿದೆ. 2014 ಮಾರ್ಚ್ಗೆ ದೇಶಾದ್ಯಂತ 1,200 ಸೇವಾ ಕೇಂದ್ರ, 600 ಎಟಿಎಂ ತೆರೆಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ತಿಳಿಸಿದ್ದಾರೆ.
--