ಮಂಗಳೂರು: ಬಂಜೆತನ ನಿವಾರಣೆ ಕೇಂದ್ರ ಉದ್ಘಾಟನೆ
ಮಂಗಳೂರು: ಬಂಜೆತನ ನಿವಾರಣೆ ಚಿಕಿತ್ಸೆಗಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಕರ್ಯ ಹೊಂದಿರುವ ಎಂಆರ್‌ಎಂಸಿ-ಐವಿಎಫ್ ಸೆಂಟರ್ ನಗರದ ಪಳ್ನೀರ್‌ನ ಕಾವೇರಿ ಕಟ್ಟಡದಲ್ಲಿ ಶನಿವಾರ ಶುಭಾರಂಭಗೊಂಡಿದೆ.
ಸೆಂಟರ್ ಉದ್ಘಾಟಿಸಿ ಮಾತನಾಡಿದ ನಿಟ್ಟೆ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎನ್. ವಿನಯ್ ಹೆಗ್ಡೆ, ಇಂದು ಬಹಳಷ್ಟು ಮಂದಿ ಮಕ್ಕಳಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಆಸ್ಪತ್ರೆಗೆ ತೆರಳುತ್ತಿದ್ದಾರೆ. ವಿವಿಧ ಕಾರಣಗಳಿಂದ ಇಂಥ ಸಮಸ್ಯೆ ಉಂಟಾಗುತ್ತಿದ್ದು, ಇವುಗಳಿಗೆ ಉತ್ತರ ನೀಡುವಲ್ಲಿ ಎಆರ್‌ಎಂಸಿ ಐವಿಎಫ್ ಸೆಂಟರ್ ಉತ್ತಮ ಸೇವೆ ಒದಗಿಸುತ್ತಿದೆ. ಕರಾವಳಿ ಜನ ಇದರ ಪ್ರಯೋಜನ ಪಡೆಯಲಿ ಎಂದು ಹೇಳಿದರು.
ಎಂಆರ್‌ಪಿಎಲ್ ಡಿಜಿಎಂ ಲಕ್ಷ್ಮಿ ಕುಮಾರನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ. ಸರೋಜ, ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಅಧ್ಯಕ್ಷ ಮೊಹಮ್ಮದ್ ಅಮೀನ್ ಇದ್ದರು.
ಸೌಲಭ್ಯಗಳು: ಸಂಪೂರ್ಣ ಬಂಜೆತನ ಮೌಲ್ಯಮಾಪನ, ಬಂಜೆತನ ಚಿಕಿತ್ಸೆ ಸಲಹೆ, ಹಾರ್ಮೋನ್ ಪರಿಶೋಧನೆ, ಪತಿಯ ವೀರ್ಯದೊಂದಿಗೆ ಇಂಟ್ರಾ ಯುಟೆರೀನ್ ಇನ್ಸಿಮಿನೇಷನ್ ಪರೀಕ್ಷೆ, ಲೇಸರ್ ಸಹಾಯದಿಂದ ಬಸಿರು, ವಿಟ್ರಿಫಿಕೇಶನ್‌ನೊಂದಿಗೆ ಭ್ರೂಣಗಳ ಶೀತಲೀಕರಣ.