10ರಿಂದ ಕೊಂಕಣ ಮಾರ್ಗ ರೇಲ್ವೆ ವೇಳಾಪಟ್ಟಿ ಬದಲು
ಮಂಗಳೂರು: ಮಳೆಗಾಲದ ಮುಂಜಾಗ್ರತೆ ಸಲುವಾಗಿ ಕೊಂಕಣಿ ರೇಲ್ವೆ ಜೂ.10ರಿಂದ ಅ.31ರ ವರೆಗೆ ಕೊಂಕಣ ಮಾರ್ಗದಲ್ಲಿ ರೈಲು ಸಂಚಾರದ ಮಾನ್ಸೂನ್ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಇದು ಜೂ.15ರಿಂದ ಜಾರಿಗೆ ಬರಲಿದ್ದು, ಜು.1ರಂದು ಪ್ರಕಟವಾಗುವ ಅಖಿಲ ಭಾರತ ರೇಲ್ವೆ ವೇಳಾಪಟ್ಟಿಯಂತೆ ಇದನ್ನು ರೂಪಿಸಲಾಗಿದೆ. ಒಕ್ಹಾ-ಎರ್ನಾಕುಲಂ ವಾರದಲ್ಲಿ ಎರಡು ಬಾರಿ ಸಂಚರಿಸುವ ರೈಲು ಸಂಚಾರವನ್ನು ಜೂ.10ರಿಂದ 30ರ ವರೆಗೆ ಹಾಪ-ಒಕ್ಹಾ-ಹಾಪ ಮಧ್ಯೆ ಭಾಗಶಃ ರದ್ದುಗೊಳಿಸಲಾಗಿದೆ. ಈ ಕೆಳಗಿನ ರೈಲುಗಳು ಈಗಿನ ವೇಳಾಪಟ್ಟಿ ಬದಲು ಪರಿಷ್ಕೃತ ವೇಳಾಪಟ್ಟಿಯಲ್ಲಿ ಆರಂಭದ ನಿಲ್ದಾಣದಿಂದ ಹೊರಡಲಿವೆ. ಮಡ್ಗಗಾಂವ್-ಸಿಎಸ್ಟಿಎಂ ಕೊಂಕಣ್ಕನ್ಯಾ ಎಕ್ಸ್ಪ್ರೆಸ್ ಸಂಜೆ 4.45ಕ್ಕೆ ಹೊರಡಲಿದೆ. ಮಡ್ಗಾಂವ್-ಸಿಎಸ್ಟಿಎಂ ಮಾಂಡೋವಿ ಎಕ್ಸ್ಪ್ರೆಸ್ ಬೆಳಗ್ಗೆ 8.30, ಮಡ್ಗಾಂವ್-ಸಿಎಸ್ಟಿಎಂ ಜನಶತಾಬ್ದಿ ಎಕ್ಸ್ಪ್ರೆಸ್ ಮಧ್ಯಾಹ್ನ 12.10, ಮಡ್ಗಾಂವ್-ಎಚ್ಎನ್ಝಡ್ಎಂ ಗೋವಾ ಸಂಪರ್ಕ ಎಕ್ಸ್ಪ್ರೆಸ್ ಮಧ್ಯಾಹ್ನ 12.25, ಮಂಗಳೂರು-ಎಲ್ಟಿಟಿ ಮತ್ಸ್ಯಗಂಧ ಎಕ್ಸ್ಪ್ರೆಸ್ ಮಧ್ಯಾಹ್ನ 12.50, ಮಂಗಳೂರು-ಸಿಎಸ್ಟಿಎಂ ಸುಪರ್ಫಾಸ್ಟ್ ಎಕ್ಸ್ಪ್ರೆಸ್ ಸಂಜೆ 4.45, ಎರ್ನಾಕುಲಂ-ನಿಜಾಮುದ್ದೀನ್ ಮಂಗಳಾ ಎಕ್ಸ್ಪ್ರೆಸ್ ಬೆಳಗ್ಗೆ 10.45, ಮಡ್ಗಾಂವ್-ಮಂಗಳೂರು ಪ್ಯಾಸೆಂಜರ್ ಮಧ್ಯಾಹ್ನ 2 ಗಂಟೆಗೆ ಹೊರಡಲಿದೆ ಎಂದು ಕೊಂಕಣ ರೇಲ್ವೆ ಪ್ರಕಟಣೆ ತಿಳಿಸಿದೆ.