ಕುಟ್ರುಪಾಡಿಯಲ್ಲಿ ಮೋರಿ ಕುಸಿತ: ಸಂಚಾರಕ್ಕೆ ತೊಂದರೆ
ಉಪ್ಪಿನಂಗಡಿ: ಕಳಪೆ ಕಾಮಗಾರಿ ಫಲಶೃತಿಯಾಗಿ ಮೋರಿಯೊಂದು ಮೂರು ದಿನದ ಮಳೆಯಲ್ಲೇ ಕುಸಿದ ಬೆಳವಣಿಗೆ ಕುಟ್ರುಪಾಡಿ ಗ್ರಾಮದ ಕುಂಟೋಡಿ ಸೈಂಟ್ ಮೇರಿ ಚರ್ಚ್ ಬಳಿ ನಡೆದಿದೆ. ಕಾಮಗಾರಿಯ ಕಳಪೆಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ನಾಗರಿಕರಿಂದ ಕೇಳಿ ಬಂದಿದೆ.
ಕಡಬದಿಂದ ಕಲ್ಲುಗುಡ್ಡೆಗೆ ತೆರಳುವ ನೂರಾರು ವಾಹನಗಳು ಈ ರಸ್ತೆಯಿಂದ ತೆರಳಬೇಕಿದ್ದು ಪ್ರಯಾಣಿಕರಿಗೆ ತೊಂದರೆಯಾಗಿದೆ. ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದ್ದು, ದ್ವಿಚಕ್ರ ವಾಹನಕ್ಕೂ ಸಂಚಾರ ಕಷ್ಟವಾಗಿದೆ.
ಕಳಪೆ ಆರೋಪ: ತೀರಾ ಇತ್ತೀಚೆಗೆ ನಿರ್ಮಿಸಿದ ಮೋರಿ ಇದಾಗಿದ್ದು ಗುತ್ತಿಗೆದಾರರು ಮೋರಿಯ ನಿರ್ಮಾಣದಲ್ಲಿ ನಿಯಮಾವಳಿಯ ಪಾಲನೆಯಾಗದೇ ಇರುವುದರಿಂದ ಈ ದುಃಸ್ಥಿತಿ ಉಂಟಾಗಿದೆ ಎನ್ನುವುದು ನಾಗರಿಕರ ಆಪಾದನೆ.
ಸರ್ಕಾರಿ ಹಣದ ದುರುಪಯೋಗ ಇಲ್ಲಿ ಕಂಡು ಬಂದಿರುವುದರಿಂದ ತ್ವರಿತವಾಗಿ ಗುಣಮಟ್ಟಬದ್ಧವಾಗಿ ತಪ್ಪಿತಸ್ಥರಿಂದಲೇ ಮೋರಿ ದುರಸ್ತಿ ಮಾಡಿಸಲು ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.