ಕುಮಾರಧಾರಾ: ವರದಿ 6ಕ್ಕೆ ಬಿಡುಗಡೆ
ಪುತ್ತೂರು: ಪರಿಸರ ಅಧ್ಯಯನ ಕೇಂದ್ರ ಭಾರತೀಯ ವಿಜ್ಞಾನ ಸಂಸ್ಥೆ, ಸರ್ಕಾರದ ಪಶ್ಚಿಮ ಘಟ್ಟ ಕಾರ್ಯಪಡೆ 2013ರ ಆರಂಭದಲ್ಲಿ ನಡೆಸಿದ 'ಕುಮಾರಧಾರಾ ಅರಣ್ಯ ಜೀವವೈವಿಧ್ಯ ಪರಿಸ್ಥಿತಿಯ ಅಧ್ಯಯನ ವರದಿ' ಜೂ.6ರಂದು ಬಿಡುಗಡೆಯಾಗಲಿದೆ. ಪುತ್ತೂರಿನ ಜಿ.ಎಲ್. ಸಭಾಭವನದಲ್ಲಿ ನಡೆಯುವ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಈ ಅಧ್ಯಯನವನ್ನು ಬಿಡುಗಡೆ ಮಾಡಲಾಗುವುದು ಎಂದು ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.