ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದಕ್ಷಿಣ ಕನ್ನಡ, ಉಡುಪಿ: ಮುಂದುವರಿದ ಮುಂಗಾರು ಮಳೆ

Mainashree
Updated On : 4 Jun 2013, 10:57 am

ಮಂಗಳೂರು: ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಒಂದು ಗಂಟೆ ಧಾರಾಕಾರ ಮಳೆ ಸುರಿದಿದೆ. ನಂತರ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆ ಬಿಸಿಲು ಕಾಣಿಸಿತ್ತು. ಮುಸ್ಸಂಜೆಯಾಗುತ್ತಿದ್ದಂತೆ ಹನಿ ಮಳೆ ಸುರಿದಿದ್ದು, ತಂಪನೆಯ ವಾತಾವರಣ ಮುಂದುವರಿದಿದೆ.
ಮಳೆ ವಿವರ: ಭಾನುವಾರದಿಂದ ಸೋಮವಾರ ಬೆಳಗ್ಗೆಯವರೆಗೆ ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ಸರಾಸರಿ 8.4 ಮಿ.ಮೀ ಹೆಚ್ಚು ಮಳೆಯಾಗಿದೆ. ಪುತ್ತೂರು- 3.6 ಮಳೆ ಸುರಿದಿದೆ. ಮಂಗಳೂರು ಮತ್ತು ಸುಳ್ಯದಲ್ಲಿ ಯಾವುದೇ ಮಳೆ ದಾಖಲಾಗಿಲ್ಲ.
ಉಡುಪಿ ವರದಿ: ಬೇಸಿಗೆಯ ತಾಪದಲ್ಲಿ ಬೆಂದಿದ್ದ ಜನರಿಗೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಯು ತಂಪೆರೆದಿದೆ. ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆ ಸೋಮವಾರ ಬೆಳಗ್ಗೆ ವರೆಗೂ ಮುಂದುವರಿದಿದೆ. ವಿಪರೀತ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು ವಾಹನಗಳ ಓಡಾಟದಿಂದ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಪಾದಚಾರಿಗಳಿಗೆ ನಡೆದುಕೊಂಡು ಹೋಗುವುದಕ್ಕೆ ಕಷ್ಟವಾಗುತ್ತಿದೆ. ಸೋಮವಾರ ಮಧ್ಯಾಹ್ನ ನಂತರದಲ್ಲಿ ಮಳೆ ತೀವ್ರತೆ ಕಡಿಮೆಯಾಗಿದ್ದು ಮೋಡ ಕವಿದ ವಾತವರಣವಿತ್ತು. ಉಡುಪಿಯಲ್ಲಿ 58.8 ಮಿ.ಮೀ., ಕುಂದಾಪುರದಲ್ಲಿ 89.8 ಮಿ.ಮೀ., ಕಾರ್ಕಳದಲ್ಲಿ 48.6 ಮಿ.ಮೀ.ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement