ಬೈಕ್ ಡಿಕ್ಕಿ: ಮಹಿಳೆ ಗಾಯ
ಮೂಲ್ಕಿ: ಬೈಕ್ ಡಿಕ್ಕಿಯಾಗಿ ಮಹಿಳೆಯ ಕೈ ಮುರಿತವಾದ ಘಟನೆ ಇಲ್ಲಿನ ಕೆನರಾ ಬ್ಯಾಂಕ್ ಬಳಿಯ ಪಂಚಮಹಾಲ್ ರಸ್ತೆಯಲ್ಲಿ ಸೋಮವಾರ ಸಂಭವಿಸಿದೆ. ಮೂಲ್ಕಿ ಕೆ.ಎಸ್.ರಾವ್ ನಗರ ನಿವಾಸಿ ಸುಶೀಲಾ (67) ಗಾಯಗೊಂಡವರು. ಗಾಯಾಳುವನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಬೈಕ್ ಸವಾರ ಅಂಬರೀಶ್ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.