ಶಾಸಕರು ಕನ್ನಡದಲ್ಲೇಚರ್ಚೆ ನಡೆಸಲಿ: ಕರವೇ ಒತ್ತಾಯ
ಮಂಗಳೂರು: ವಿಧಾನಸಭೆಯಲ್ಲಿ ಬೆಳಗಾವಿ ಶಾಸಕರು ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಖಂಡಿಸಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯು ಮೊದಲಿನಿಂದಲೂ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದು, ಇದೀಗ ಮರಾಠಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಅವಮಾನ ಮಾಡಿದ್ದಾರೆ ಎಂದು ಘಟಕದ ಅಧ್ಯಕ್ಷ ಮೋಹನ್ದಾಸ್ ರೈ ಆರೋಪಿಸಿದ್ದಾರೆ. ಎಲ್ಲ ಶಾಸಕರು ಅಧಿವೇಶನಗಳಲ್ಲಿ ಕನ್ನಡದಲ್ಲಿ ಚರ್ಚೆ ನಡೆಸಬೇಕು. ಮುಂದಿನ ದಿನಗಳಲ್ಲಿ ಎಂಇಎಸ್ ಕನ್ನಡನಾಡಿನ ಕಾನೂನು, ಭಾಷೆ, ನೆಲ, ಜಲದ ವಿಚಾರದಲ್ಲಿ ತಕರಾರು ಎತ್ತಿದರೆ ಕರವೇ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಮೋಹನ್ದಾಸ್ ರೈ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.