ಇಂದು ಸಚಿವ ಖಾದರ್ ಪ್ರವಾಸ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಜೂ.7ರಂದು ಮಂಗಳೂರಿನಲ್ಲಿ ಪ್ರವಾಸ ಕೈಗೊಳ್ಳುವರು. ಬೆಳಗ್ಗೆ 9.30ಕ್ಕೆ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಹಾಗೂ ತಾಲೂಕು ವೈದ್ಯಾಧಿಕಾರಿಗಳ ಸಭೆ ನಡೆಸುವರು. 10.15ಕ್ಕೆ ಉಳ್ಳಾಲ ಪುರಸಭೆಯಲ್ಲಿ ಪ್ರಾಕೃತಿಕ ವಿಕೋರ, ಕಡಲ್ಕೊರೆತ, ಕುಡಿವ ನೀರಿನ ಕುರಿತು ಸಭೆ. 11ಕ್ಕೆ ನಗರದ ನೆಹರೂ ಮೈದಾನದಲ್ಲಿ ಆಟೋ ಎಕ್ಸ್ಪೋ ಉದ್ಘಾಟನೆ, ಸಂಜೆ 4ಕ್ಕೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖಾ ಎಂಜಿನಿಯರ್ರ ಸಭೆ. 6ಕ್ಕೆ ಅಸೈಗೋಳಿ ಲಯನ್ಸ್ ಕ್ಲಬ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಭೇಟಿ. ರಾತ್ರಿ 7ಕ್ಕೆ ಕುತ್ತಾರು ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ, 7.30ಕ್ಕೆ ಕುತ್ತಾರು ಸಲಾತ್ ನಗರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಎಂದು ಆಪ್ತ ಸಹಾಯಕರ ಪ್ರಕಟಣೆ ತಿಳಿಸಿದೆ.