ನದಿಯಲ್ಲಿ ಅಪರಿಚಿತ ಶವ ಪತ್ತೆ
ಮಂಗಳೂರು: ನೇತ್ರಾವತಿ ನದಿ ಹರಿವಿನ ಅಡಂಕುದ್ರುನಲ್ಲಿ ಅಪರಿಚಿತ ಗಂಡಸಿನ ಶವ ಗುರುವಾರ ಪತ್ತೆಯಾಗಿದೆ. ಮೈಮೇಲೆ ಬಟ್ಟೆಬರೆ ಇಲ್ಲದೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಸುಮಾರು 30ರಿಂದ 35 ವರ್ಷದ ವ್ಯಕ್ತಿಯದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸ್ಥಳೀಯ ಅನಿಲ್ ವೇಗಸ್ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಚಹರೆಯ ವ್ಯಕ್ತಿ ಕಾಣೆಯಾಗಿದ್ದು ಗೊತ್ತಾದಲ್ಲಿ ನಗರ ಪೊಲೀಸ್ ಆಯುಕ್ತಕರ ಕಚೇರಿ(0824-2220803) ಅಥವಾ ಉಳ್ಳಾಲ ಪೊಲೀಸ್ ಠಾಣೆಗೆ(0824-2466269)ಸಂಪರ್ಕಿಸಬಹುದು.