ಆಟೋ ಎಕ್ಸ್ಪೋ ಮೇಳ ಉದ್ಘಾಟನೆ
ಮಂಗಳೂರು: 'ಮುಂಬೈನಲ್ಲಿ ಕರಾವಳಿ ಭಾಗದ ಹೆಚ್ಚು ಮಂದಿ ದೊಡ್ಡ ದೊಡ್ಡ ಉದ್ಯಮಿಗಳಿದ್ದು, ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರಿನಲ್ಲಿ ವಾಹನ ಮೇಳಗಳು ನಡೆಯುವ ಅಗತ್ಯವಿದೆ' ಎಂದು ಹಿಂದಿ ಚಿತ್ರನಟ ಗುಲ್ಶನ್ ಗ್ರೊವೆರ್ ಹೇಳಿದ್ದಾರೆ.
ದಕ್ಷಿಣಭಾರತದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ ಸಿಟಿ ಆನ್ ವ್ಹೀಲ್ಸ್ ಆಟೋ ಎಕ್ಸ್ಪೋವನ್ನು ನೆಹರೂ ಮೈದಾನದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ವಾಹನ ಮೇಳದಲ್ಲಿ ಸುಮಾರು 35 ಹೆಸರಾಂತ ಕಂಪನಿಗಳಾದ ಲ್ಯಾಂಡ್ ರೋವರ್, ಆಡಿ, ಜಾಗ್ವರ್, ವೋಲ್ವೋ, ಬಿಎಂಡಬ್ಲ್ಯೂ, ಸ್ಕೋಡ, ರಿನಾಲ್ಟ್, ಟೊಯಟಾ, ಫೋರ್ಡ್, ಹುಂಡೈ, ಮಾರುತಿ ಸುಝುಕಿ, ಫಿಯಟ್, ವೋಕ್ಸ್ವೇಗನ್ ಕಂಪನಿಗಳ ನೂತನ ಆವಿಷ್ಕಾರದ ಕಾರುಗಳು ಪ್ರದರ್ಶನದಲ್ಲಿದ್ದವು.