ಮಂಗಳೂರಲ್ಲಿ ಧಾರಾಕಾರ ಮಳೆ
ಮಂಗಳೂರು: ನಗರದಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಗಾಳಿ, ಮಳೆ ಧಾರಾಕಾರ ಸುರಿದಿದೆ. ಮಧ್ಯಾಹ್ನದವರೆಗೂ ಬಿಡದೆ ಸುರಿದಿದ್ದ ಮಳೆ, ಸಂಜೆ ವೇಳೆ ಕಡಿಮೆಗೊಂಡಿತ್ತು. ಮೋಡ ಕವಿದ ವಾತಾವರಣವಿತ್ತು. ಗೋರಿಗುಡ್ಡೆ ಬಳಿ ಬೆಳಗ್ಗೆ ಗುಡ್ಡ ಜರಿದು ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದ್ದು, ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ, ವಿದ್ಯುತ್ ಸಮಸ್ಯೆ ಪರಿಹರಿಸಿದೆ.
ಶುಕ್ರವಾರ ಬೆಳಗ್ಗಿನವರೆಗೆ ನಗರದಲ್ಲಿ 71.6 ಮಿ.ಮೀ., ಅತಿ ಹೆಚ್ಚು ಮಳೆ ಸುರಿದಿದೆ. ಬೆಳ್ತಂಗಡಿಯಲ್ಲಿ 4.8 ಮಿ.ಮೀ., ಕಡಿಮೆ ಮಳೆಯಾಗಿದೆ. ಮಳೆ ವಿವರ: ಬಂಟ್ವಾಳ- 32.6 ಮಿ.ಮೀ., ಮೂಡುಬಿದಿರೆ- 32.2 ಮಿ.ಮೀ., ಪುತ್ತೂರು- 16.2 ಮಿ.ಮೀ., ಕಡಬ- 14.2 ಮಿ.ಮೀ., ಸುಳ್ಯ- 13.8 ಮಿ.ಮೀ. ಮಳೆ ದಾಖಲಾಗಿದೆ.