ರಿಕ್ಷಾದಲ್ಲಿ ಚಾಲಕಗೆ ಹೃದಯಾಘಾತ
ಮಂಗಳೂರು: ರಥಬೀದಿಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತವಾಗಿ ಚಾಲಕ ಸುರೇಶ್ (43) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶುಕ್ರವಾರ ಮಧ್ಯಾಹ್ನ 12.35ರ ವೇಳೆಗೆ ರಿಕ್ಷಾ ಚಲಾಯಿಸಿಕೊಂಡು ಬರುತ್ತಿದ್ದ ಜೆಪ್ಪು ನಿವಾಸಿ ಸುರೇಶ್ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದ ವೃತ್ತ ಬಳಿ ಬಂದಾಗ ಎದೆನೋವಿನಿಂದ ಚೀರಿ ರಿಕ್ಷಾ ನಿಲ್ಲಿಸಿದರು. ರಿಕ್ಷಾದಿಂದ ಕೆಳಗೆ ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಕೆ.ಎಸ್.ರಾವ್ ರಸ್ತೆಯ ತಂಗುದಾಣದಲ್ಲಿ ರಿಕ್ಷಾ ನಿಲ್ಲಿಸುತ್ತಿದ್ದರು.