ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೈಗೆಟಕುವ ಸ್ಥಿತಿಯಲ್ಲಿ ವಿದ್ಯುತ್ ತಂತಿ: ಮೆಸ್ಕಾಂ ನಿರ್ಲಕ್ಷ್ಯ

Vishwanath S
Updated On : 11 Jun 2013, 11:40 am

ಮೂಲ್ಕಿ: ಇಲ್ಲಿನ ಬಪ್ಪನಾಡು ದೇವಳದ ಸಮೀಪದ ಬಡಗಹಿತ್ಲುವಿನಲ್ಲಿ ವಿದ್ಯುತ್ ತಂತಿಗಳು ಗದ್ದೆಯ ಮೇಲೆ ಅತೀ ತಗ್ಗಿನಲ್ಲಿದೆ. ಇಲ್ಲಿನ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದ್ದು ಮೆಸ್ಕಾಂ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ಮಳೆಗಾಲ ಆರಂಭಗೊಂಡಿದ್ದು ಕಳೆದ 15 ದಿನಗಳಿಂದ ಮೂಲ್ಕಿ ವ್ಯಾಪ್ತಿಯಲ್ಲಿ ಅನಿಯಮಿತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ದಿನದಲ್ಲಿ ವಿದ್ಯುತ್ ಇರುವ ಅವಧಿ ಕಡಿಮೆಯಾಗಿದ್ದು, ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲು ಮೆಸ್ಕಾಂ ಇಲಾಖೆ ಮುಂದಾಗುತ್ತಿಲ್ಲ.
ಕೃಷಿಗೆ ಆತಂಕ: ಮಳೆಗಾಲ ಸಂದರ್ಭ ಗದ್ದೆಯಲ್ಲಿ ಕೃಷಿ ಕಾರ್ಯ ಆರಂಭವಾಗಲಿದ್ದು, ಮೂಲ್ಕಿಯ ಬಪ್ಪನಾಡು ದೇವಳದ ಸಮೀಪದ ಬಡಗಹಿತ್ಲುವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಒಂದು ವಿದ್ಯುತ್ ಕಂಬದಿಂದ ಇನ್ನೊಂದು ಕಂಬಕ್ಕೆ ಹೋಗಿರುವ ತಂತಿಗಳು ತೀರ ಕೆಳ ಮಟ್ಟದಲ್ಲಿದ್ದು, ಕೈಗೆಟಕುವ ಸ್ಥಿತಿಯಲ್ಲಿದೆ. ಇದರಿಂದ ಕೃಷಿ ಕಾರ್ಯ ಆರಂಭಿಸಲು ತೊಂದರೆಯಾಗಿದ್ದು, ಈ ಬಗ್ಗೆ ಮೆಸ್ಕಾಂ ಇಲಾಖೆಗೆ ಹಲವು ಬಾರಿ ದೂರು ನೀಡಲಾಗಿತ್ತು. ಮೂಲ್ಕಿ ಪರಿಸರದಲ್ಲಿ ಕೆಲವು ಕಡೆ ವಿದ್ಯುತ್ ತಂತಿಗಳಿಗೆ ಮರಗಳ ಕೊಂಬೆಗಳು ತಾಗಿದ್ದು, ಅದನ್ನು ಇವರೆಗೂ ವಿಲೇವಾರಿ ಮಾಡಿಲ್ಲ. ಇದರಿಂದ ಮಳೆಗಾಲದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಮೆಸ್ಕಾಂ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement