ಪುತ್ತೂರು ತಾಲೂಕಲ್ಲಿ 7 ಡೆಂಘೀ ಪ್ರಕರಣ ದೃಢ
ಪುತ್ತೂರು: ತಾಲೂಕಿನಲ್ಲಿ ಜನವರಿಯಿಂದ ಈವರೆಗೆ ಒಟ್ಟು 50 ಶಂಕಿತ ಡೆಂಘೀ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವರದಿಯಾದ 7 ಪ್ರಕರಣಗಳು ಡೆಂಘೀ ಎಂದು ದೃಢಪಟ್ಟಿವೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಬದ್ರುದ್ದೀನ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಇದುವರೆಗೆ ಡೆಂಘೀ ಜ್ವರದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ.