ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ ಸುತ್ತಮುತ್ತ ಡೆಂಘೀ ಹಾವಳಿ

Rashmi Kasaragodu
Updated On : 11 Jun 2013, 1:10 am

ಸುಳ್ಯ: ಸುಳ್ಯ ತಾಲೂಕು ಡೆಂಘೀ ಬಾಧೆಯಿಂದ ಅಕ್ಷರಶಃ ತತ್ತರಿಸಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಡೆಂಘೀ ಜ್ವರ ಬಾಧೆ ವ್ಯಾಪಕವಾಗಿದ್ದು ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಈಗಾಗಲೇ ಶಂಕಿತ ಡೆಂಘೀಗೆ ಗುತ್ತಿಗಾರು ಸಮೀಪ ನಿವಾಸಿಗಳಾದ ನಿರ್ಮಲ ಕಾಡುಕೊಲ್ಯ, ಜಯರಾಮ ಗೌಡ ಮತ್ತು ಕೇನ್ಯ ನಿವಾಸಿ ಕೃಷ್ಣಪ್ಪ ನಾಯ್ಕ್ ಎಂಬವರು ಬಲಿಯಾಗಿದ್ದಾರೆ. ಆದರೆ ಆರೋಗ್ಯ ಇಲಾಖೆ ಇದು ಡೆಂಘೀಯಿಂದಾದ ಸಾವಲ್ಲ ಎಂದು ಸ್ಪಷ್ಟಪಡಿಸಿದೆ.  ಸುಳ್ಯ ತಾಲೂಕಿಗೆ ಡೆಂಘೀ ಹೊಸತೇನಲ್ಲ. ಕಳೆದ ವರ್ಷ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಂಡುಬಂದಿದ್ದ ಡೆಂಘೀ ತಿಂಗಳ ಹಿಂದೆ ಗುತ್ತಿಗಾರು ಪರಿಸರದ ಮೆಟ್ಟಿನಡ್ಕ, ಕಾಡುಕೊಲ್ಯ, ಹಾಲೆಮಜಲು, ಚತ್ರಪ್ಪಾಡಿ, ಉತ್ರಂಬೆ, ಸಾಲ್ತಾಡಿ ಪ್ರದೇಶಗಳಲ್ಲಿ ಕಂಡುಬಂದು ನಂತರ ಪಕ್ಕದ ಗ್ರಾಮಗಳಾದ ನೆಲ್ಲೂರು ಕೆಮ್ರಾಜೆ, ಉಬರಡ್ಕ ಮಿತ್ತೂರು, ಅಮರಮುಡ್ನೂರು, ದೇವಚಳ್ಳ, ಸುಬ್ರಹ್ಮಣ್ಯ, ಬಳ್ಪ, ಏನೆಕಲ್ಲು ಗ್ರಾಮಗಳಿಗೂ ವ್ಯಾಪಿಸಿದೆ. ಸುಳ್ಯ ಸರ್ಕಾರಿ ಆಸ್ಪತ್ರೆ, ಗುತ್ತಿಗಾರು ಆರೋಗ್ಯ ಕೇಂದ್ರಗಳಿಗೆ ದಾಖಲಾದ ಜ್ವರ ಪೀಡಿತರು ಪುತ್ತೂರು, ಮಂಗಳೂರುಗಳ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement